Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸಿಎಂ ಬದಲಾವಣೆ ವಿಚಾರ: ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಸ್ಥಿತಿ ಬಂದಿದೆ : ಜಗದೀಶ್ ಶೆಟ್ಟರ್

ಸಿಎಂ ಬದಲಾವಣೆ ವಿಚಾರ: ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಸ್ಥಿತಿ ಬಂದಿದೆ : ಜಗದೀಶ್ ಶೆಟ್ಟರ್

Spread the love

ಹುಬ್ಬಳ್ಳಿ : ರಾಜ್ಯದಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಆದ್ರೆ ಇನ್ನೊಂದೆಡೆ ಸಿಎಂ ಬದಲಾಣೆ ಇಲ್ಲವೆಂದು ಸಚಿವರಾಧಿಯಾಗಿ ಹೈಕಮಾಂಡ್ ಸಹ ಸ್ಪಷ್ಟನೆ ನೀಡಿದೆ. ಆದ್ರೂ ಸಿಎಂ ಬದಲಾವಣೆ ಪ್ರಶ್ನೆ ಪದೇ ಪದೇ ಕೇಳಿ ಬರತ್ತಾ ಇರುವದರಿಂದ ಸಿಎಂ ಕುರ್ಚಿ‌ಖಾಲಿ ಇಲ್ಲ ಅಂತ, ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಸ್ಥಿತಿ ಬಂದಿದೆ ಎಂದು ಜಗದೀಶ್ ಶೆಟ್ಟರ್ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಶಾಸಕ ಅರವಿಂದ ಬೆಲ್ಲದ ಹಾಗೂ ಸಿಎಂ ಸ್ಥಾನ ಬದಲಾವಣೆಗೆ ಪ್ರತಿಕ್ರಿಯೆ ‌ನೀಡಿದ ಅವರು, ಸಿಎಂ ಬದಲಾವಣೆ ವಿಚಾರ ನಾನು ಪ್ರತಿಕ್ರಿಯೆ ನೀಡುವುದಿಲ್ಲ.

ಇನ್ಮುಂದೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಅಂತಾ ಬೋಡ್೯ ಹಾಕಿಕೊಂಡು ಅಡ್ಡಾಡುವ ಪರಿಸ್ಥಿತಿ ಬಂದಿದೆ.ಅರವಿಂದ ಬೆಲ್ಲದ್ ಮುಂದಿನ‌ ಸಿಎಂ ವಿಚಾರ ಈ ಬಗ್ಗೆ ನಾನು ಮಾತನಾಡುವುದಿಲ್ಲ.

ಈ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆಯಾಗಿದೆ. ಯಾರಾದ್ರು ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಆಗಬೇಕಾದ ಪರಿಸ್ಥಿತಿ ಬಂದಿದೆ.
ಯಾರ ಯಾರ ಹಣೆಲಿ ಏನು ಇರುತ್ತೊ ಅದು ಆಗುತ್ತೆ.

ಅರವಿಂದ ಬೆಲ್ಲದ ನಿಮ್ನನ್ನ ಓವರ್ ಟೇಕ್ ಮಾಡ್ತಿದಾರೆ ಎನ್ನುವ ವಿಚಾರ ಅದು ಅವರ ಸ್ವಭಾವ ಆಗಿದೆ ಎಂದು ಹೇಳಿ ಹೊರಟು ಹೋದರು.

About Santosh Naregal

Check Also

ಮಾನವೀಯತೆ ಮೆರದ ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್

Spread the loveಹುಬ್ಬಳ್ಳಿ : ದ್ವಿಚಕ್ರ ವಾಹನ ಮೇಲಿಂದ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್ …

Leave a Reply

Your email address will not be published. Required fields are marked *

[the_ad id="389"]