Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಅಭಾವವಿಲ್ಲ : ಸಚಿವ ಜಗದೀಶ್ ಶೆಟ್ಟರ್

ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಅಭಾವವಿಲ್ಲ : ಸಚಿವ ಜಗದೀಶ್ ಶೆಟ್ಟರ್

Spread the love

ಹುಬ್ಬಳ್ಳಿ : ಜಿಲ್ಲೆಯಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅಗತ್ಯತೆಯ ಮೇರೆಗೆ ಆದ್ಯತಾ ವಲಯದ ಪ್ರತಿಯೊಬ್ಬರಿಗೂ ಕೋವಿಡ್ ವ್ಯಾಕ್ಸಿನ್ ಲಭ್ಯವಿದೆ.ಲಸಿಕೆಯ ಅಭಾವವಿಲ್ಲ ಈ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು ಎಂದು ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸಿನಲ್ಲಿಂದು ನಡೆದ ಕೋವಿಡ್ ನಿರ್ವಹಣೆ ಪರಿಶೀಲನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಒದಗಿಸಲು ಯಾವುದೇ ಕೊರತೆಯಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ, ತಕ್ಷಣ ಪರಿಹಾರ ನೀಡುವ ವ್ಯವಸ್ಥೆ ಹೊಂದಲಾಗಿದೆ. ನಗರ ಪ್ರದೇಶದಲ್ಲಿಯೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ತರಹದ ಕುಂದುಕೊರತೆ ಉಂಟಾಗದಂತೆ ಮುಂಜಾಗ್ರತೆಯನ್ನು ಹೊಂದಿರಬೇಕು ಹಾಗೂ ಸಾರ್ವಜನಿಕರು ಲಸಿಕೆ ಬಗ್ಗೆ ತಪ್ಪು ಕಲ್ಪನೆ ಹೊಂದಬಾರದು. ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದು ಕೋವಿಡ್ ತಡೆಯಬೇಕು ಎಂದರು. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಹೆಚ್ಚಿನ ಆದ್ಯತೆಯನ್ನು ನೀಡಿ ಅಗತ್ಯ ಲಸಿಕೆ ಪ್ರಮಾಣ ಸೇರಿದಂತೆ ಇತರೆ ಪರಿಕರಗಳನ್ನು ಕಲ್ಪಿಸುವಂತೆ ರಾಜ್ಯಸರ್ಕಾರಕ್ಕೆ ಟಿಪ್ಪಣಿಯನ್ನು ಸಲ್ಲಿಸಿದ್ದಲ್ಲಿ ರಾಜ್ಯ ಹಾಗೂ ಕೇಂದ್ರ ಅಗತ್ಯ ಕ್ರಮ ಕೈಗೊಳ್ಳುತ್ತವೆ. ಸಾರ್ವಜನಿಕರು ಲಸಿಕೆ ಪಡೆಯುವಲ್ಲಿ ಯಾವುದೇ ಭಯಪಡಬಾರದು , ಸುಳ್ಳು ಸುದ್ದಿಯನ್ನು ಪರಿಗಣಿಸದೆ
ಚಿಕಿತ್ಸೆಯನ್ನು ಪಡೆದು ಸಾರ್ವಜನಿಕ ಹಾಗೂ ಕೌಟುಂಬಿಕವಾಗಿ ಸುರಕ್ಷಿತರಾಗಬೇಕು. ಸರ್ಕಾರವು ನಿಗದಿ ಪಡಿಸಿದ ಸುರಕ್ಷತಾ ನಿಯಮಗಳನ್ನು ಪಾಲಿಸಿದಲ್ಲಿ ಕೋವಿಡ್-19 ಪಿಡುಗನ್ನು ದೇಶದಿಂದ ಹೊರದೂಡಬಹುದು .ಇದಕ್ಕಾಗಿ ಎಲ್ಲರೂ ಶ್ರಮಿಸುವುದು ಅಗತ್ಯವಾಗಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ್ ಕೆ‌‌.ಪಾಟೀಲ ಮಾತನಾಡಿ,
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನವು ನಿಗದಿಪಡಿಸಿದಂತೆ ವಿದೇಶಕ್ಕೆ  ವಿಧ್ಯಾರ್ಥಿ ಹಾಗೂ ಉದ್ಯೋಗದ ನಿಮಿತ್ತ ತೆರಳುವ 18 ರಿಂದ 44 ವರ್ಷದ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಅರ್ಹತಾ ಪ್ರಮಾಣಪತ್ರ ನೀಡಲಾಗುವುದು. ರಾಜ್ಯ ಸರ್ಕಾರವು ಗುರುತಿಸಿರುವಂತೆ ಮಾನಸಿಕ ಅಸ್ವಸ್ಥತೆ ಸೇರಿದಂತೆ ಅಂಗವೈಕಲ್ಯ ಹೊಂದಿದ ಫಲಾನಿಭವಿಯೊಂದಿಗೆ ಒಬ್ಬ ಆರೈಕೆದಾರ, ಖೈದಿಗಳು, ಚಿತಾಗಾರ(ಸ್ಮಶಾನ) ರುದ್ರಭೂಮಿಯಲ್ಲಿ ಕೆಲಸ ಮಾಡುವ ಸ್ವಸಹಾಯಕ ಸಿಬ್ಬಂದಿ ಕೋವಿಡ್-19 ಕರ್ತವ್ಯಕ್ಕೆ ನಿಯೊಜಿಸಲಾದ ಶಿಕ್ಷಕರು,ಸಾರಿಗೆ  ಸಿಬ್ಬಂದಿ, ಆಟೋ, ಕ್ಯಾಬ್ ಚಾಲಕರು,‌ವಿದ್ಯುತ್ ಮತ್ತು ನೀರು ಸರಬರಾಜು ಮಾಡುವರು, ಅಂಚೆ ಸಿಬ್ಬಂದಿ, ಬೀದಿಬದಿಯ ವ್ಯಾಪಾರದವರು,‌ಭದ್ರತೆ ಹಾಗೂ ಹೌಸ್ ಕೀಪಿಂಗ್ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ಅನಾರೋಗ್ಯದಿಂದ ಬಳಲುತ್ತಿರುವ ಆರೈಕೆದಾರರು,‌ ಮಕ್ಕಳ ಸಂರಕ್ಷಣೆ ಹಾಗೂ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್, ಗ್ಯಾಸ್ ಸರಬರಾಜು ಹಾಗೂ ಪೆಟ್ರೋಲ್ ಬಂಕ್ ಕರ್ಮಚಾರಿ, ಔಷಧಿ ತಯಾರಿಸುವ ಕಂಪನಿಯ ಸಿಬ್ಬಂದಿ, ಆಕ್ಸಿಜನ್, ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ಪೂರೈಸುವ ಎಲ್.ಎಮ್.ಓ ಹಾಗೂ ಸಿಬ್ಬಂದಿ ಗುರುತಿನ‌ ಚೀಟಿ ಹೊಂದಿದ ಫಲಾನುಭವಿಗಳು ಕೇಂದ್ರ ಆಹಾರ ನಿಗಮ ಮತ್ತು ರಾಜ್ಯ ಆಹಾರ ನಿಗಮದ ಸಿಬ್ಬಂದಿಗಳು ಎ.ಪಿಎಮ್.ಸಿ ಕೆಲಸಗಾರರನ್ನು ಅಗ್ನಿಶಾಮಕ,‌18 ಮತ್ತು 44 ವರ್ಷದ ಕೋಮಾರ್ಬಿಡಿಟಿ ಹೊಂದಿರುವ ಫಲಾನುಭವಿ,ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಸಿಬ್ಬಂದಿ ತೋಟಗಾರಿಕೆ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಿಬ್ಬಂದಿ ಒಳಗೊಂಡಿರುತ್ತಾರೆ ಎಂದರು.

ಆದ್ಯತಾ ಗುಂಪು: ಕಟ್ಟಡ ಕಾರ್ಮಿಕರು, ಟೆಲಿಕಾಂ, ಇಂಟರ್ನೆಟ್,‌ ಕೇಬಲ್‌ ಆಪರೇಟರ್, ವಿಮಾನಯಾನ ಸಿಬ್ಬಂದಿ, ಬ್ಯಾಂಕ್ ಹಾಗೂ ವಿಮೆ‌‌ ಸಿಬ್ಬಂದಿ, ಪೆಟ್ರೋಲ್ ಬಂಕ್, ಚಿತ್ರೋದ್ಯಮ ಉದ್ಯಮಿ, ಕಾರ್ಯಕರ್ತ, ಸಿಬ್ಬಂದಿ, ವಕೀಲರು, ಹೋಟೆಲ್ ಮತ್ತು ಅತಿಥ್ಯ ಸೇವಾದಾರರು ಕೆಎಮ್.ಎಫ್, ರೈಲು, ಗಾರ್ಮೆಂಟ್ಸ್, ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಜೇಲ್, ಆರ್.ಎಸ್.ಕೆ ಸಿಬ್ಬಂದಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆಟಗಾರರುಸ್ವಾಧಾರ ಗೃಹ ವಾಸಿಗಳು, ರಾಜ್ಯ ಮಹಿಳಾ ನಿಲಯ ವಾಸಿಗಳು, HAL ಸಿಬ್ಬಂದಿ ವಿದೇಶಕ್ಕೆ ಉದ್ಯೋಗ ಹಾಗೂ ವ್ಯಾಸಂಗಕ್ಕಾಗಿ ತೆರಳುರವವರು ಆದ್ಯತಾ ಗುಂಪಿನಲ್ಲಿ ಸೇರಿರುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ್ ಮದಿನಕರ್ ಉಪಸ್ಥಿತರಿದ್ದರು.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]