Home / Top News / ಬಿಜೆಪಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧ ಮಾಡಿದರೆ ಬರುವ ಚುನಾವಣೆಯಲ್ಲಿ ಉತ್ತರ ಕೊಡಬೇಕಾಗುತ್ತೆ : ಪ್ರಮೋದ್ ಮುತಾಲಿಕ್

ಬಿಜೆಪಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧ ಮಾಡಿದರೆ ಬರುವ ಚುನಾವಣೆಯಲ್ಲಿ ಉತ್ತರ ಕೊಡಬೇಕಾಗುತ್ತೆ : ಪ್ರಮೋದ್ ಮುತಾಲಿಕ್

Spread the love

ಹುಬ್ಬಳ್ಳಿ : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಪಾಲಿಕೆ ಹಾಗೂ ಸ್ಥಳೀಯ ಶಾಸಕರು ವಿರೋಧ ಹಾಗೂ ತೊಂದರೆ ಕೊಟ್ಟರೆ . ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ನೀಡುವಂತೆ ಗಣೇಶ ಮೂರ್ತಿ ಹಿಡಿದು ಮನೆ ಮನೆಗೆ ತೆರಳಿ ತಿಳುವಳಿಕೆಯ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಮಿತಿ ರಚನೆ ಮಾಡಿ ನಿರ್ಣಯ ತೆಗೆದುಕೊಳ್ಳಲು ತಿಳಿಸಿದೆ. ಅಗಸ್ಟ್ 29 ರಂದು ನಿರ್ಣಯ ತಿಳಿಸಲು ಸೂಚಿಸಿದೆ. ಆದರೆ ಅನುಮತಿ ನೀಡಲು ಸಮಿತಿಯ ರಚನೆ ಅವಶ್ಯಕತೆ ಇರಲಿಲ್ಲ. ಆದರೆ ವಿನಾಕಾರಣ ಕಾಲಹರಣ ಮಾಡಲು ಈ ರೀತಿಯ ನಾಟಕವನ್ನು ಪಾಲಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಪಾಲಿಕೆಯ ಮೇಯರ್ ಅನುಮತಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ರಿಪೋರ್ಟ್ ಇರಬಾರದು ಎಂದು ಕಂಡಿಷನ್ ಹಾಕಲಾಗಿದೆ. ನಾವು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ವಿರೋಧ ಮಾಡಿಲ್ಲ. ಹಾಗೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಈವರೆಗೆ ಯಾರೂ ವಿರೋಧ ಮಾಡಿಲ್ಲ. ಹಾಗೇನಾದರೂ ಸೋಮವಾರ ಅನುಮತಿ ನೀಡಲು ಹಿಂದೆಟ್ಟು ಹಾಕಿದರೇ ಒತ್ತಾಯ ಪೂರ್ವಕವಾಗಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ಸರ್ಕಾರ 144 ಕಲಂ, ಗುಂಡೆಟ್ಟು, ಲಾಠಿ ಚಾರ್ಜ್ ಮಾಡಿಸಿದರು ನಮ್ಮ ಪಟ್ಟು ಬಿಡುವುದಿಲ್ಲ ಎಂದರು.

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಜೆಪಿ ಅವಕಾಶ ಮಾಡಿಕೊಡದೇ ಹೋದರೇ ಮುಂದಿನ ದಿನಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಗಣೇಶ ಮೂರ್ತಿಗೆ ಅವಮಾನ ಮಾಡಿದದವರಿಗೆ ಮತ ಹಾಕಬೇಡಿ ಎಂದು ತಿಳಿಸುತ್ತೇವೆ ಎಂದರು.

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]