Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಏ 7 ರಂದು ವಿಶೇಷ ಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ

ಏ 7 ರಂದು ವಿಶೇಷ ಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

ಹುಬ್ಬಳ್ಳಿ : ೭೫ ವರ್ಷಗಳ ಪ್ರಗತಿಪರ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಅಂಗವಾಗಿ ಒಲಿಂಪಿಕ್ಸ್ ಭಾರತ ಜಾಗತಿಕ ಸಂಸ್ಥೆ ಆಯೋಜಿಸಿದ ವಿಶೇಷ ಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇದೇ ದಿ. ೭ ರಂದು ನಗರದ ಬಸ್ ನಿಲ್ದಾಣದ ಹಿಂದಗೆಡೆಯ ವಾಸವಿ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಫೇಷಲ್ ಒಲಿಂಪಿಕ್ಸ್ ಭಾರತ ಕ್ರೀಡಾ ನಿರ್ದೇಶಕರಾದ ಭಾರತಿ ಕೊಠಾರಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಅವರು, ದೇಶಾದ್ಯಂತ ೭೫೦೦೦ ಕ್ರೀಡಾಪಟುಗಳನ್ನು ೭೫ ನಗರದಲ್ಲಿ, ೭೫೦ ಕೇಂದ್ರಗಳಲ್ಲಿ ಹಾಗೂ ನಮ್ಮ ರಾಜ್ಯದ ೭೫೦೦ ಕ್ಕೆ ವಿಶೇಷ ಕ್ರೀಡಾಪಟುಗಳಿಗೆ ಸ್ಪೇಷಲ್ ಒಲಿಂಪಿಕ್ಸ್ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ ತರಭೇತಿ ಪಡೆದ ವೈದ್ಯಕೀಯ ವೃತ್ತಿಪರರು ಹಮ್ಮಿಕೊಳ್ಳಲಿದ್ದಾರೆ ಎಂದರು..

ಈ ಶಿಬಿರದಲ್ಲಿ ದಂತ ಪರೀಕ್ಷೆ, ಹಾಗೂ ಆರೋಗ್ಯ, ಪೋಷಣೆ, ಸಾಮಾನ್ಯ ಆರೋಗ್ಯದ ಅರಿವು ಮಾನದಂಡಗಳು ಇವು ಆರೋಗ್ಯವಂತ ಕ್ರೀಡಾಪಟುಗಳ ಸ್ಪೆಷಲ್ ಒಲಿಂಪಿಕ್ಸ್ ಕಾರ್ಯಕ್ರಮವಾಗಿದ್ದು, ಕ್ರೀಡಾಪಟುಗಳಿಗೆ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಇನ್ನೂ ವಿಶೇಷ ಮಕ್ಕಳಿಗೆ ಮತ್ತೇ ಕ್ರೀಡೆಗೆ ಬಾ ಎನ್ನುವ ಘೋಷಣೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕದಿಂದ ಹುಬ್ಬಳ್ಳಿ–ಧಾರವಾಡ, ಬಾಗಲಕೋಟ, ಬೆಳಗಾವ, ಗದಗ ಜಿಲ್ಲೆಗಳಿಂದ ಸುಮಾರು ೮೦೦ ರಿಂದ ೧೦೦೦ ವಿಶೇಷ ಕ್ರೀಡಾಪಟುಗಳಿಗೆ ಈ ಆರೋಗ್ಯ ಶಿಬಿರವು ಎಸ್.ಡಿ.ಎಂ. ಯೂನಿವರ್ಸಿಟಿದಿಂದ ಆಹಾರ ಪೌಷ್ಟಿಕತಜ್ಞ, ಫಿಟ್ನೆಸ್ ಲವರ್ಸ್ ಹಾಗೂ ಕಿಮ್ಸ್ ಹುಬ್ಬಳ್ಳಿಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕ್ರೀಡಾಪಟು ಡಾ. ಗುರುರಾಜ ಕುಲಕರ್ಣಿ, ಡಾ. ಮುನಿಕಿ ಪಾಟೀಲ್, ಎಸ್.ಡಿ.ಎಂ. ಡೆಂಟಲ್ ಆಸ್ಪತ್ರೆಯ ಡಾ. ಶೃತಿ ಪಾಟೀಲ್ ಪಾಟೀಲ, ಪೌಷ್ಟಿಕ ತಜ್ಞೆ ಮಾಧುರಿ ಆಕಲವಾಡಿ ಉಪಸ್ಥಿತರಿದ್ದರು

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]