Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಅಕಾಲಿಕ ಮಳೆಯಿಂದ ಬೆಳೆ ಹಾನಿ ಪರಿಹಾರವನ್ನು ಬೆಳೆ ಹಾನಿ ಸರ್ವೇ ಮಾಡಿ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಅಕಾಲಿಕ ಮಳೆಯಿಂದ ಬೆಳೆ ಹಾನಿ ಪರಿಹಾರವನ್ನು ಬೆಳೆ ಹಾನಿ ಸರ್ವೇ ಮಾಡಿ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Spread the love

ಹುಬ್ಬಳ್ಳಿ : ಅಕಾಲಿಕ ಮಳೆಯಿಂದ ಬೆಳೆ ನಾಶಹೊಂದಿ ಸಂಕಷ್ಟಕ್ಕೀಡಾದ ರೈತರಿಗೆ ಬೆಳೆ ಹಾನಿ ಸರ್ವೇ ಮಾಡಿ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಕೃಷಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ಹಾಗು ರೈತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಎದರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ.
ಇತ್ತೀಚೆಗೆ ಸಂಭವಿಸಿದ ಅನಿರೀಕ್ಷಿತ ಹಾಗೂ ಅಕಾಲಿಕವಾದ ಭಾರೀ ಮಳೆಯಿಂದ ರಾಜ್ಯಾದ್ಯಂತ ಸುಮಾರು 34 ಲಕ್ಷ ಹೆಕ್ಟರ್ ಬೆಳೆ ನಾಶ ಹೊಂದಿದೆ ಎಂದು ವರದಿಯಾಗಿದೆ . ಅದರಂತೆ ಹುಬ್ಬಳ್ಳಿ ತಾಲ್ಲೂಕಿನಾದ್ಯಂತ ರೈತರು ಬೆಳೆದ ಮೆಣಸಿನಕಾಯಿ , ಹತ್ತಿ , ಕಡಲೆ ಹಾಗೂ ಇತರೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ . ಈ ಕುರಿತು ಸರ್ಕಾರ ಯಾವುದೇ ಸರ್ವೇ ಮಾಡದೇ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ . ಇದರಲ್ಲಿ ಮಳೆಯಾಧಾರಿತ ಬೆಳೆ , ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೀಡಿದ ಪರಿಹಾರ ಯಾವುದೇ ರೀತಿಯಿಂದಲೂ ವೈಜ್ಞಾನಿಕವಾಗಿ ನೀಡಿಲ್ಲ . ಸರ್ಕಾರ ಕೂಡಲೇ ಸರ್ವೇ ನಡೆಸಿ , ಸೂಕ್ತ ಪರಿಹಾರ ನೀಡಬೇಕು. ಅಂದಾಜು ರೈತರು ಬಿತ್ತನೆ ಹಾಗೂ ಬೆಳೆಗಳಿಗೆ ಮಾಡಿದ ಖರ್ಚು , ವೆಚ್ಚಗಳನ್ನು ಆಧರಿಸಿ ಪರಿಹಾರ ಸರ್ವೇಗಳನ್ನು ಮಾಡಿ , ಸರಿಯಾದ ಸರ್ವೇಕಾರ್ಯ ಮಾಡಿ ಕ್ರಮ ಕೈಗೊಳ್ಳಬೇಕು . ಬೆಳೆ ನಷ್ಟ ಹೊಂದಿದ ಎಲ್ಲ ಬೆಳೆಗಳಿಗೂ ಪರಹಾರ ನೀಡಬೇಕು . ಬೆಳೆ ನಷ್ಟ ಹೊಂದಿದ ರೀತಿಯಲ್ಲಿ ಸರ್ವೆ ಕಾರ್ಯ ಎಲ್ಲ ರೈತರಿಗೂ ಬೆಳೆ ಹಾನಿ ಪರಿಹಾರವನ್ನು ನೀಡುವಂತೆ ಆಗ್ರಹಿಸಿದರು.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]