Home / Top News / ಲೋಚನೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯ ಶ್ಲೋಕಸಾಗರದಲ್ಲಿ ಭಕ್ತ ಜನತೆ

ಲೋಚನೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯ ಶ್ಲೋಕಸಾಗರದಲ್ಲಿ ಭಕ್ತ ಜನತೆ

Spread the love

ಕುಂದಗೋಳ : ಕಳೆದ ಎರೆಡು ತಿಂಗಳುಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಲೋಚನೇಶ್ವರ ಮಠದ 5ನೇ ಪೀಠಾಧಿಪತಿ ರಾಚೋಟೇಶ್ವರ ಮಹಾಸ್ವಾಮಿಗಳು ತಮ್ಮ 103ನೇ ವಯಸ್ಸಿನಲ್ಲಿ ಲೋಚನೇಶ್ವರ ಮಠದಲ್ಲೇ ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ಲಿಂಗೈಕ್ಯರಾಗಿದ್ದಾರೆ.

ಸರಿ ಸುಮಾರು 200 ವರ್ಷ ಇತಿಹಾಸದ ಕುಂದಗೋಳ ತಾಲೂಕಷ್ಟೇ ಅಲ್ಲದೇ ರಾಜ್ಯಾದ್ಯಂತ ಭಕ್ತರನ್ನು ಹೊಂದಿದ್ದ ಸ್ವಾಮಿಗಳು ತಮ್ಮ ಪ್ರವಚನ ಹಾಗೂ ಮಾತಿನ ಶೈಲಿಯಿಂದಲೇ ಹೆಸರಾಗಿದ್ದರು, 2019ರಲ್ಲಿ ಲೋಚನೇಶ್ವರ ಮಠಕ್ಕೆ ರಾಚೋಟೇಶ್ವರ ದೇವರನ್ನು ಸರ್ವ ಸ್ವಾಮಿಗಳ ನೇತೃತ್ವದಲ್ಲಿ ಪೀಠಾಧಿಕಾರ ಮಾಡಿ ಮಠದ ಏಳ್ಗೆಗೆ ಚಿಂತನೆ ಮಾಡಿದ್ದರು, ಲೋಚನೇಶ್ವರ ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಭೂದಾನ ಮಾಡಿ ಶಿಕ್ಷಣ ಪ್ರೇಮ ತೋರಿದ್ದರು.

ಕಳೆದ 2 ಎರೆಡು ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಲೋಚನೇಶ್ವರ ಮಹಾಸ್ವಾಮಿಗಳಿಗೆ ಭಕ್ತರು ಮಠದ ಹಿಂದಿನ ಮಠಾಧಿಪತಿಗಳಂತೆ ಅವರಿಗೂ ಸಹ ಮಠದಲ್ಲಿ ಲಿಂಗೈಕ್ಯರಾಗುವದಕ್ಕೆ ಮೊದಲೇ ಗದ್ದುಗೆ ನಿರ್ಮಿಸಿದ್ದರು.

ಸಧ್ಯ ಮ.ನಿ.ಪ್ರ.ರಾಜೋಟೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದು ಇಡೀ ಭಕ್ತ ಸಾಗರವೇ ಶ್ಲೋಕದಲ್ಲಿ ಮುಳುಗಿದೆ.

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]