Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ನಾವು ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ ಕಾರ್ನರ್ ಇಲ್ಲ : ಹೆಚ್ ಡಿ ಕುಮಾರಸ್ವಾಮಿ

ನಾವು ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ ಕಾರ್ನರ್ ಇಲ್ಲ : ಹೆಚ್ ಡಿ ಕುಮಾರಸ್ವಾಮಿ

Spread the love

ಹುಬ್ಬಳ್ಳಿ : ನಾವು ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ ಕಾರ್ನರ್ ಇಲ್ಲ. ನಮಗೆ ಬಿಜೆಪಿ ಮೇಲೆ‌ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಯಾಕೆ ಮಾಡುತಿದ್ದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರ ಸ್ವಾಮಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ನಗರದ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು,
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಎಂಬ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.ಸಿದ್ಧರಾಮಯ್ಯ ಅವರಿಗೆ ಅದನ್ನ ಬಿಟ್ಟು ಬೇರೆ ಏನು ಹೇಳಲಿಕ್ಕೆ ಸಾಧ್ಯ. ಬಿಜೆಪಿ ಜೊತೆನೆ 5 ವರ್ಷ ಸರ್ಕಾರ ಮಾಡುತಿದ್ದೆ.
2006 ರಲ್ಲಿ ಸರ್ಕಾರ ಮಾಡಲು ಕಾರಣ ಇದೇ ಸಿದ್ದರಾಮಯ್ಯ.
ಅವರ ನಡವಳಿಕೆಯಿಂದ ಮಾಡಿದ್ದು. ನಮ್ಮ ಪಕ್ಷದ ಬಗ್ಗೆ ಬೇರೆ ವಿಷಯ ಇಲ್ಲದೇ ಮಾತು ಎತ್ತಿದರೆ ಒಳ‌ ಒಪ್ಪಂದ ಅಂತಾ ಸಿದ್ಧರಾಮಯ್ಯ ಮಾತನಾಡುತಿದ್ದಾರೆ ಎಂದರು.

ಸಿಂದಗಿಯಲ್ಲಿ ಗೆಲುವು ನಮದೆ …

ಸಿಂದಗಿಯಲ್ಲಿ ಚುನಾವಣೆ ಗೆಲ್ತೆವೆ. ಕಳೆದ 5 ದಿನಗಳಿಂದ ಪ್ರಚಾರದಲ್ಲಿ ಭಾಗವಹಿಸಿದ್ದೆನೆ
ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ದೇವೆಗೌಡರ ಕಾಲದ ಹಾಗೂ ನನ್ನ ಕಾಲದ ನೀರಾವರಿ ಯೋಜನೆಗಳು ರೈತರ ಸಾಲ ಮನ್ನಾ ಬಗ್ಗೆ ಹಳ್ಳಿಗಳಲ್ಲಿ ಜನ ಸ್ಪಂದಿಸಿ ಮಾತನಾಡುತಿದ್ದಾರೆ.
ಜನತಾ‌‌ ಪರಿವಾರದ ಸಿ ಎಂ ಉದಾಸಿ ಬಿಜೆಪಿಗೆ ಹೋದ ನಂತರ ನಮಗೆ ಹಾನಗಲ್ ನಲ್ಲಿ ನಾಯಕತ್ವದ ಕೊರತೆ ಇತ್ತು.
ಈ ಬಾರಿ ನಾವು ಹಾನಗಲ್ ನಲ್ಲಿ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದೆವೆ.
ಅಲ್ಲಿಯ ಸ್ಥಿತಿ ನೋಡಿ ನಾನು ಮಾತನಾಡ್ತೆನೆ.

ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್…
ಸಿದ್ದರಾಮಯ್ಯ ಅವರಿಗೆ
ಜೆಡಿಎಸ್ ನ ಸಮಸ್ಯೆ ಇಲ್ಲಾ ಅಂತಾ ಅವರ ಭಾವನೆ ಇರಬಹುದು. ನಾನು ಅವರಿಗೆ ಮನವಿ ಮಾಡ್ತೆನೆ .
ಸಿದ್ಧ ರಾಮಯ್ಯ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳುವ‌ ಕೆಲಸ ಮಾಡಬೇಡಿ ಎಂದು ಮನವಿ ಮಾಡ್ತೆನೆ. ನಾನು ಯಾರ ಮೇಲೂ ವೈಯಕ್ತಿಕ ನಿಂದನೆ ಮಾಡಿಲ್ಲ . ಆದರೆ ನಾನು ಎಲ್ಲ ನಾಯಕರಿಗೂ ಹೇಳ್ತೆನೆ.
ಚುನಾವಣೆಯಲ್ಲಿ ಆಗಿರಬಹುದು ಅಥವಾ ಜನಪ್ರತಿನಿಯಾಗಿರಬಹುದು ಸರ್ಕಾರ ನಡೆಸಬೇಕಾದರೆ ಅದರ ಆಧಾರದ ಮೇಲೆ ಚರ್ಚೆ ಮಾಡಿ. ವೈಯಕ್ತಿಕವಾದ‌ ವಿಚಾರ ಚರ್ಚೆ ಮಾಡಲು ಹೋದರೆ ಪರಸ್ಪರ ಕೆಸರೆಚಾಟ ಮಾಡಿಕೊಂಡು ಹೋದರೆ ಅದಕ್ಕೆ ಅಂತಿಮ ಇರಲ್ಲ.

ಮುಖಾಮುಖಿಯಾದ ಜೋಶಿ, ಶೆಟ್ಟರ್ ಹಾಗೂ ಕುಮಾರ ಸ್ವಾಮಿ… ಮಾತುಕತೆ

ನಗರದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಬರುವಾಗ ಕುಮಾರ ಸ್ವಾಮಿ ಮಾಧ್ಯಮದವರ ಜೊತೆ ಮಾತನಾಡುತ್ತಿರುವಾಗ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಕುಮಾರಸ್ವಾಮಿಗೆ ಆರೋಗ್ಯ ವಿಚಾರಿಸಿದರು. ಆಗ ಕುಮಾರ ಸ್ವಾಮಿ ನಿಮ್ಮ ಆಶೀರ್ವಾದ ಸರ್ ಆರಾಮಾ ಇದ್ದೇನೆ ಎಂದು ಹೇಳಿ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ಮುಂದುವರೆಸಿದರು.

About Santosh Naregal

Check Also

ಮಾನವೀಯತೆ ಮೆರದ ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್

Spread the loveಹುಬ್ಬಳ್ಳಿ : ದ್ವಿಚಕ್ರ ವಾಹನ ಮೇಲಿಂದ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್ …

Leave a Reply

Your email address will not be published. Required fields are marked *

[the_ad id="389"]