Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಮೇ.27 ,28 ಹಾಗೂ 29 ಮೂರು ದಿನಗಳ ಕಾಲ ಕಿರಾಣಿ ,ಮಾಂಸ ಮಾರಾಟ ಅವಧಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ವಿಸ್ತರಣೆ

ಮೇ.27 ,28 ಹಾಗೂ 29 ಮೂರು ದಿನಗಳ ಕಾಲ ಕಿರಾಣಿ ,ಮಾಂಸ ಮಾರಾಟ ಅವಧಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ವಿಸ್ತರಣೆ

Spread the love

ಧಾರವಾಡ : ಕೊರೊನಾ ನಿಯಂತ್ರಿಸಲು ಕಠಿಣ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನತೆಗೆ ಕಿರಾಣಿ , ಮಾಂಸದ ಪದಾರ್ಥಗಳನ್ನು ಪೂರೈಸಲು ಮೇ.27 ಗುರುವಾರ , ಮೇ.28 ಶುಕ್ರವಾರ ಹಾಗೂ ಮೇ.29 ಶನಿವಾರ ಈ ಮೂರು ದಿನಗಳ ಕಾಲ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಹೆಚ್ಚು ಜನದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಕಿರಾಣಿ ಹಾಗೂ ಮಾಂಸ ಮಾರಾಟದ ಸಮಯದ ಅವಧಿ ವಿಸ್ತರಿಸಲಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡದ ಕಿರಾಣಿ ವರ್ತಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರು ಏಕಕಾಲಕ್ಕೆ ಅಂಗಡಿಗಳ ಮುಂದೆ ಜನಸಂದಣಿ ಉಂಟು ಮಾಡದೇ ಪ್ರತ್ಯೇಕವಾಗಿ ಬಂದು ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕಿರಾಣಿ ,ಮಾಂಸದ ಪದಾರ್ಥಗಳನ್ನು ಖರೀದಿಸಬೇಕು.ಈ ಮೂರು ದಿನಗಳ ಅವಕಾಶದ ನಂತರ ಕಠಿಣ ಲಾಕ್‌ಡೌನ್ ಅವಧಿ ಪೂರ್ಣಗೊಂಡ ಬಳಿಕ ಜೂನ್ 7 ರ ನಂತರವೇ ಈ ವಸ್ತುಗಳು ದೊರೆಯಲಿವೆ. ತರಕಾರಿ ಮತ್ತು ಹಾಲು ಮಾರಾಟಕ್ಕೆ ಪ್ರತಿದಿನ ಬೆಳಿಗ್ಗೆ 6 ರಿಂದ 8 ರವರೆಗೆ ಅವಕಾಶ ಇರುವುದರಿಂದ ಇವುಗಳ ಪೂರೈಕೆ ಎಂದಿನಂತೆಯೇ ಇರುತ್ತದೆ.ಇವುಗಳ ಸಮಯದಲ್ಲಿ ಬದಲಾವಣೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]