Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಮಹಾಮಗರ ಪಾಲಿಕೆ ಚುನಾವಣೆಯಲ್ಲಿ ಕುರುಡು ಕಾಂಚಾಣದ ಸದ್ದು:ಹುಬ್ಬಳ್ಳಿಯಲ್ಲಿ 82.75 ಲಕ್ಷ ರೂ ಹವಾಲಾ ಹಣ ಜಪ್ತಿ

ಮಹಾಮಗರ ಪಾಲಿಕೆ ಚುನಾವಣೆಯಲ್ಲಿ ಕುರುಡು ಕಾಂಚಾಣದ ಸದ್ದು:ಹುಬ್ಬಳ್ಳಿಯಲ್ಲಿ 82.75 ಲಕ್ಷ ರೂ ಹವಾಲಾ ಹಣ ಜಪ್ತಿ

Spread the love

 

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಮತದಾರರನ್ನು ಸೆಳೆಯಲು ಪ್ರಮುಖ‌ ಪಕ್ಷಗಳು ಹಣ ಹಂಚಿಕೆ ಮಾಡುತ್ತಿವೆ ಎಂಬ ಆರೋಪಕ್ಕೆ ಪುರಾವೆ ಸಿಕ್ಕಿದೆ.

ಸ್ವಿಪ್ಟ್ ಡಿಜೈರ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 82.75 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡ ಕೇಶ್ವಾಪುರ ಠಾಣೆ ಪೊಲೀಸರು ನಿನ್ನೆ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊ0ದಿಗೆ ಇಲ್ಲಿನ ಕುಸುಗಲ್ ರಸ್ತೆಯ ಆಕ್ಸಫರ್ಡ್ ಕಾಲೇಜ್ ಬಳಿ ಬಾಗಲಕೋಟೆಯಿಂದ ನಗರಕ್ಕೆ ಬರುತ್ತಿದ್ದ ಸ್ವಿಪ್ಟ್ ಡಿಜೈರ್(ಕೆಎ 36, ಎನ್ 2055)ನ್ನು ತಡೆದು ಪರಿಶೀಲಿಸಿದಾಗ ಹಣ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.

ಮೂಲತಃ ರಾಜಸ್ಥಾನ ಮೂಲದವನಾದ ಹಾಲಿ ಬಾಗಲಕೋಟ ಭವಾನಿ ಟೀ ಸ್ಟಾಲ್ ಟಾಂಗಾ ಸ್ಟಾಂಡ್ ಹತ್ತಿರದ ನಿವಾಸಿ ಕಾರು ಚಾಲಕ ಗೋಕುಲರಾಮ ವೀರಾಮಾರಾಮ ರಬಾರಿ(34) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೇ ಭಾರಿ‌ ಹಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗರ ಎಡೆಮಾಡಿಕೊಟ್ಟಿದೆ.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]