Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ವಾಜಪೇಯಿ ಬಗ್ಗೆ ಟಿಕೆ ಟಿಪ್ಪಣಿ ಮಾಡಿತ್ತಿರುವದು ನಾಚಿಕೆಗೇಡಿನ ಸಂಗತಿ – ಮಾಜಿ ಸಿಎಂ ಜಗದೀಶ್ ಶೆಟ್ಟರ

ವಾಜಪೇಯಿ ಬಗ್ಗೆ ಟಿಕೆ ಟಿಪ್ಪಣಿ ಮಾಡಿತ್ತಿರುವದು ನಾಚಿಕೆಗೇಡಿನ ಸಂಗತಿ – ಮಾಜಿ ಸಿಎಂ ಜಗದೀಶ್ ಶೆಟ್ಟರ

Spread the love

ಹುಬ್ಬಳ್ಳಿ : ಇತ್ತೀಚೆಗೆ ಕಾಂಗ್ರೆಸ್‌ನವರಯ ಮಾಜಿ ಪ್ರಧಾನಿ ಅಜಾತಶತ್ರು ಅಟಲ ಬಿಹಾರಿ ವಾಜಪೇಯಿ ಅವರ ಬಗ್ಗೆ ಕೀಲಾಗಿ ಹೇಳಿಕೆ ನೀಡಿದ್ದು, ಅವರ ಹೇಳಿಕೆ ತುಂಬಾ ಬೇಜಾರು ತಂದಿದೆ. ವಾಜಪೇಯಿ ಅವರ ಬಗ್ಗೆ ಕೀಳಾಗಿ ಹೇಳುವ ಮೂಲಕ ಕಾಂಗ್ರೆಸ್ ನಾಶವಾಗುವ ಸ್ಥಿತಿಗೆ ಬಂದು ತಲುಪಿದೆ. ಅಜಾತಶತ್ರು ವಾಜಪೇಯಿ ಕುರಿತು ಟಿಕೆ ಟಿಪ್ಪಣಿ ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ನೇತೃತ್ವದಲ್ಲಿ ನಡೆಯುತ್ತಿರುವ ಜನಾರ್ಶೀವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಅಟಲ ಬಿಹಾರ ವಾಜಪೇಯಿ ಅವರು ಕೇವಲ ಬಿಜೆಪಿ ಪಕ್ಷಕ್ಕೆ ಮಾತ್ರ ನಾಯಕರಾಗಿದಿಲ್ಲ ಜಗತ್ತ ನಾಯಕರಾಗಿದ್ದರು. ದೇಶದ ಸರ್ವ ಸಮುದಾಯದವರು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಅಂತಹವರ ಬಗ್ಗೆ ಕಾಂಗ್ರೆಸ‌ನವರು ಕೀಳು ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯ ಮಾಡಬೇಕಿತ್ತು. ಆದರೆ ಅದನ್ನು ಇಂದು ಕಾಂಗ್ರೆಸ್ ನಾಯಕರು ಮಾಡುತ್ತಿಲ್ಲ. ಜನರ ಸಮಸ್ಯಗಳ ಕುರಿತು ಚರ್ಚೆ ನಡೆಬೇಕಾಗಿದ್ದ ಜಾಗದಲ್ಲಿ ಕಾಂಗ್ರೆಸ್ ನಾಯಕರು ಧರಣಿ, ಸತ್ಯಾಗ್ರಹ ಮಾಡುವ ಮೂಲಕ ಪ್ರತಿಪಕ್ಷ ದೇಶದಲ್ಲಿ ಎಷ್ಟೊಂದು ವಿಕ್ ಇದೆ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ ಎಂದು ಹರಿಹಾಯ್ದರು.

About Santosh Naregal

Check Also

ಮಾನವೀಯತೆ ಮೆರದ ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್

Spread the loveಹುಬ್ಬಳ್ಳಿ : ದ್ವಿಚಕ್ರ ವಾಹನ ಮೇಲಿಂದ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್ …

Leave a Reply

Your email address will not be published. Required fields are marked *

[the_ad id="389"]