Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೃಹತ್ತಾದ ಶ್ರೀ ಸಿದ್ದಾರೋಢರ ಮೂರ್ತಿ ಸ್ಥಾಪನಗೆ ಉತ್ತರ ಜನಶಕ್ತಿ ಸೇನಾ ಪಕ್ಷ ಒತ್ತಾಯ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೃಹತ್ತಾದ ಶ್ರೀ ಸಿದ್ದಾರೋಢರ ಮೂರ್ತಿ ಸ್ಥಾಪನಗೆ ಉತ್ತರ ಜನಶಕ್ತಿ ಸೇನಾ ಪಕ್ಷ ಒತ್ತಾಯ

Spread the love

ಹುಬ್ಬಳ್ಳಿ : ಉಣಕಲ್ ಕೆರೆಯನ್ನು ಶ್ರೀ ಚನ್ನಬಸವ ಸಾಗರವೆಂದು ನಾಮಕರಣ ಮಾಡಿದ್ದು ಅಲ್ಲಿ ಬೃಹತ್ತಾದ ಶ್ರೀ ಚನ್ನಬಸವೇಶ್ವರ ಮೂರ್ತಿ ಸ್ಥಾಪಿಸಬೇಕು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಎದುರುಗಡೆ ಇರುವ ಶ್ರೀ ವಿವೇಕಾನಂದರ ಮೂರ್ತಿ ತೆರವುಗೊಳಿಸಿ ರೈಲ್ವೆ ನಿಲ್ದಾಣ ಹೆಸರಿನಂತೆ ಬೃಹತ್ತಾದ ಶ್ರೀ ಸಿದ್ದಾರೋಢರ ಮೂರ್ತಿಯನ್ನು ಸ್ಥಾಪಿಸಬೇಕೆಂದು ಉತ್ತರ ಜನಶಕ್ತಿ ಸೇನಾ ಪಕ್ಷ ಒತ್ತಾಯಿಸಿದೆ.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಈ ಕುರಿತು ಪಕ್ಷದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್.ಎಸ್.ಶಂಕರಣ್ಣ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿಯಲ್ಲೇ ಇಲ್ಲಿನ ಸ್ಥಳೀಯ ಜನರ ಸ್ವಾಭಿಮಾನಕ್ಕೆ ಅವರು ಪೂಜಿಸುವ ಶರಣ ಸಂತರಿಗೆ, ಅವರು ಆರಾಧಿಸುವ ಹುಬ್ಬಳ್ಳಿಯ ಹೆಮ್ಮೆಯ ಹಿರಿಯ ಧೀಮಂತ ನಾಯಕರಿಗೆ ಆಡಳಿತ ಸರ್ಕಾರದಿಂದ ಅವಮಾನವಾಗಿದೆ ಅಲ್ಲದೇ ಜನಮನದಿಂದ ಆ ಮಹನೀಯರನ್ನು ಮರೆಮಾಚಿ ಉತ್ತರ ಭಾರತದ ಹಿರಿಯರನ್ನು ಸ್ಥಾಪಿಸುವ ಹುನ್ನಾರ ಆಡಳಿತ ಸರ್ಕಾರದ್ದು ಆಗಿದೆ ಎಂದು ಆರೋಪಿಸಿದರು.

ನಮ್ಮ ಮನೆಯಲ್ಲಿ ನಮ್ಮ ಹಿರಿಯರ ಫೋಟೋ ಇಟ್ಟು ಪೂಜಿಸದೇ, ಪಕ್ಕದ ಮನೆಯ ಹಿರಿಯರ ಇಟ್ಟು ಪೂಜಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ ಅವರು ಕೂಡಲೇ ಸ್ಥಳೀಯ ಜನರ ಭಾವನೆಗಳಿಗೆ ಗೌರವ ಕೊಟ್ಟು ಸ್ಟೇಶನ್ ರೋಡ್ ನಲ್ಲಿ ಬೃಹತ್ತಾದ ಸರದಾರ ಮೆಹಬೂಬ್ ಅಲಿಖಾನ ರಸ್ತೆಯ ನಾಮಫಲಕ ಅಳವಡಿಸಬೇಕು, ಹೊಸೂರು ಸರ್ಕಲ್ ಅನ್ನು ಈಗಾಗಲೇ ಸಂಗೊಳ್ಳಿ ರಾಯಣ್ಣ ಸರ್ಕಲ್ ಎಂದು ನಾಮಫಲಕ ಇಟ್ಟಿದ್ದು ಅಲ್ಲಿ ಬೃಹತ್ತಾದ ವೀರ ಸಂಗೊಳ್ಳಿ ರಾಯಣ್ಣ ನ ಮೂರ್ತಿ ಯನ್ನು ಸ್ಥಾಪಿಸಿ ನಮ್ಮ ಮಹನೀಯ, ಹಿರಿಯರಿಗೆ ಆದ ಅನ್ಯಾಯ ಸರಿ ಪಡಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೋ.ಎಸ್.ಎನ್.ಬಡಿಗೇರ, ಝೇಡ್, ಎನ್. ಮುಲ್ಲಾ ಇದ್ದರು.

About Santosh Naregal

Check Also

ಮಾನವೀಯತೆ ಮೆರದ ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್

Spread the loveಹುಬ್ಬಳ್ಳಿ : ದ್ವಿಚಕ್ರ ವಾಹನ ಮೇಲಿಂದ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್ …

Leave a Reply

Your email address will not be published. Required fields are marked *

[the_ad id="389"]