Home / Top News / ತಂಗಿ ಚುಡಾಯಿಸಿದ ಯುವಕನಿಗೆ ಚಾಕುವಿನಿಂದ ಇರಿದ ಅಣ್ಣ ತಮ್ಮ

ತಂಗಿ ಚುಡಾಯಿಸಿದ ಯುವಕನಿಗೆ ಚಾಕುವಿನಿಂದ ಇರಿದ ಅಣ್ಣ ತಮ್ಮ

Spread the love

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ. ತಂಗಿಯನ್ನ ಚುಡಾಯಿಸಿದ ಎಂಬ ಕಾರಣಕ್ಕೆ ಅಣ್ಣಂದಿರಿಬ್ಬರು ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹಳೇ ಹುಬ್ಬಳ್ಳಿ ಠ ಧಾರವಾಡ ಕಾಲೋನಿಯಲ್ಲಿ ನಡೆದಿದೆ.

ಚಂದ್ರಶೇಖರ್ ಎಂಬಾತನೇ ತೀವ್ರವಾಗಿ ಗಾಯಗೊಂಡ ಯುವಕನಾಗಿದ್ದಾನೆ. ಈತ ಯುವತಿಯೊಬ್ಬಳಿಗೆ ಚುಡಾಯಿಸಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟಾದ ಯುವತಿ ಸಹೋದರರಾದ ಕಿರಣ್ ಹಾಗೂ ಅಭಿ ಎನ್ನುವರು ಚಾಕು ಇರಿದಿದ್ದಾರೆ.

ತೀವ್ರ ಗಾಯವಾಗಿರುವ ಚಂದ್ರುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]