Home / Top News / ಹುಬ್ಬಳ್ಳಿಯ ಮೂರು ಸಾವಿರ ಮಠದ ವಿವಾದ: ತೀವ್ರ ಕುತೂಹಲ ಮೂಡಿಸಿದ ಮುಜಗೂ ಶ್ರೀ ಹಾಗೂ ದಿಂಗಾಲೇಶ್ವರ ಸ್ವಾಮೀಜಿ ಭೇಟಿ

ಹುಬ್ಬಳ್ಳಿಯ ಮೂರು ಸಾವಿರ ಮಠದ ವಿವಾದ: ತೀವ್ರ ಕುತೂಹಲ ಮೂಡಿಸಿದ ಮುಜಗೂ ಶ್ರೀ ಹಾಗೂ ದಿಂಗಾಲೇಶ್ವರ ಸ್ವಾಮೀಜಿ ಭೇಟಿ

Spread the love

 

ಹುಬ್ಬಳ್ಳಿ : ಉತ್ತರ ಕರ್ನಾಟಕದ ಪ್ರತಿಷ್ಠಿತ ಮೂರು ಸಾವಿರ ಮಠದ ವಿವಾದ ಸಧ್ಯಕ್ಕೆ ಶಾಂತವಾಗಿದೆ. ಆದ್ರೆ ಇದರ ಮಧ್ಯೆ

ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳನ್ನ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ಮಾಡಿದ್ದು ತೀವ್ರ ಕುತೂಹಲ‌ ಮೂಡಿಸಿದೆ‌

ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ ಮೂರುಸಾವಿರ ಮಠದ ಉತ್ತರಾಧಿಕಾರಿ ಆಗಬೇಕೆಂದು ಕೋರ್ಟ್ ಮೆಟ್ಟಿಲು ಹತ್ತಿದವರು. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಠದ ಉನ್ನತ ಮಟ್ಟದ ಸಮಿತಿ ಸೇರಿದಂತೆ ಮೂಜಗು ಶ್ರೀಗಳು ಒಪ್ಪಿಗೆ ಸೂಚಿಸಿರಲಿಲ್ಲ. ಆದ್ರೆ ಈಗ ಉಭಯ ಶ್ರೀಗಳ ಬೇಟಿ ಬಹಳಷ್ಟು ಕುತೂಹಲ ಕೆರಳಿಸಿದೆ.

ಕಳೆದ ಎರಡೂ ವರ್ಷದದಿಂದ ಶಾಂತವಾಗಿದ್ದ ಮಠದ ಉತ್ತರಾಧಿಕಾರಿ ಜಗಳದಿಂದ ಇಬ್ಬರು ಸ್ವಾಮೀಜಿಗಳು ಯಾವುದೇ ಕಾರಣಕ್ಕೂ ಮುಖಾಮುಖಿ ಆಗುತ್ತಲೇ ಇರಲಿಲ್ಲ‌. ಈಗ ಏಕಾಏಕಿ ಭೇಟಿಯಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರಿಂದ ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ಮುನ್ನೆಲೆಗೆ ಬರುತ್ತಾ ಎಂಬ ಕುತೂಹಲ ಮೂಡಿಸಿದೆ‌‌
ಇಬ್ಬರ ಶ್ರೀಗಳ ಭೇಟಿಯ ಉದ್ದೇಶವಾದ್ರೂ ಏನು ಇರಬಹುದು ಎಂಬ ಜಿಜ್ಞಾಸೆ ಮಠದ ಭಕ್ತರಲ್ಲಿ ಕಾಡುತ್ತಿದೆ.

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]