Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / 2022 ರೊಳಗಾಗಿ ಎಲ್ಲರಿಗೂ ಸೂರು ಕಲ್ಪಿಸುವ ಯೋಜನೆ ಅನುಷ್ಠಾನ : ಡಾ. ಸುರೇಶ್ ಇಟ್ನಾಳ

2022 ರೊಳಗಾಗಿ ಎಲ್ಲರಿಗೂ ಸೂರು ಕಲ್ಪಿಸುವ ಯೋಜನೆ ಅನುಷ್ಠಾನ : ಡಾ. ಸುರೇಶ್ ಇಟ್ನಾಳ

Spread the love

ಹುಬ್ಬಳ್ಳಿ :ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಧಾನ ಮಂತ್ರಿ ಆವಾಸ ಹಾಗೂ ನಗರ ವಸತಿ ಯೋಜನೆಯಡಿ ಬಡವರಿಗೆ ಸೂರು ಕಲ್ಪಿಸುತ್ತಿವೆ. 2022 ರ ಅಂತ್ಯದೊಳಗೆ ಈ ಯೋಜನೆ ಸಂಪೂರ್ಣ ಜಾರಿಯಾಗಲಿದೆ.ಈ ಕುರಿತು ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡು, ಜನರಿಗೆ ಹಣಕಾಸು ಮತ್ತು ಸಾಲ ಸೌಲಭ್ಯ ನೆರವಿನ ಬಗ್ಗೆ ತಿಳಿಸಿ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ ಹೇಳಿದರು.

ನಗರದ ಶ್ರೀ ಕಾಡಸಿದ್ಧೇಶ್ವರ ಮಹಾವಿದ್ಯಾಲಯ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ, ವಸತಿ ಮತ್ತು ನಗರ ವ್ಯವಹಾರಗಳ ಮಿಷನ್ ಸಚಿವಾಲಯ, ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಕೆಎಲ್‌ಇ ಸಂಸ್ಥೆಯ ಸಹಯೋಗದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಿದ ಆವಾಸ್ ಪರ್ ಸಂವಾದದ ಆರ್ಥಿಕತೆಯ ಸೇರ್ಪಡೆ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಸತಿ ಯೋಜನೆ ಬಗ್ಗೆ ಅರಿವು ಮೂಡಿಸಲು ಒಂದು ದಿನದ ಸಂವಾದ ಕಾರ್ಯಕ್ರಮ ಅನುಕೂಲವಾಗಲಿದೆ.
ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆ ಮೂಲಕ ಶೇ. 6.5 ರಷ್ಟು ಕಡಿಮೆ ಬಡ್ಡಿದರದಲ್ಲಿ ಗೃಹ ನಿರ್ಮಾಣಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಮನೆ ರಿಪೇರಿ ಹಾಗೂ ನೂತನ ಮನೆ ಕಟ್ಟಡಕ್ಕಾಗಿ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆ ಜನರಿಗೆ ಅನುಕೂಲವಾಗಲಿದೆ. ಜನರು ಬ್ಯಾಂಕುಗಳಿಗೆ ತೆರಳಿ ಯೋಜನೆಗೆ ಸಂಬಂಧಪಟ್ಟ ಮಾಹಿತಿ ಪಡೆದುಕೊಂಡು ಪ್ರಯೋಜನ ಪಡೆಯಬೇಕು.
ಅವಳಿನಗರದಲ್ಲಿ ವಸತಿ ಯೋಜನೆಯಡಿ 3 ಸಾವಿರ ಅರ್ಜಿ ಪಡೆದು ಈಗಾಗಲೇ ಮಂಜೂರಾತಿ ಮಾಡಲಾಗಿದೆ. ಹೌಸಿಂಗ್ ಪ್ರಾಜೆಕ್ಟ್ ಯೋಜನೆಯಡಿ ವಾರ್ಷಿಕ ಆದಾಯ 60 ಸಾವಿರ ಒಳಗಿರುವವರನ್ನು ಸಮೀಕ್ಷೆ ನಡೆಸಿ ಗುರುತಿಸಿ, ಮನೆ ಕಲ್ಪಿಸುವ ಯೋಜನೆ ಇದೆ. ಕೊಳಚೆ ಅಭಿವೃದ್ಧಿ ಮಂಡಳಿಯಿಂದ ವಸತಿ ಯೋಜನೆಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ ಮಾತನಾಡಿ, ಬಡಜನರಿಗೆ ಮಧ್ಯಮವರ್ಗದವರಿಗೆ ಹಾಗೂ ಕೊಳಗೇರಿ ಜನರಿಗೆ ಈ ಯೋಜನೆಗಳು ಸಹಾಯಕವಾಗುತ್ತವೆ. ಸರ್ಕಾರದಿಂದ ದೊರೆತ ಸಹಾಯದೊಂದಿಗೆ ಜನರೂ ಸಹ ತಮ್ಮ ಶ್ರಮದಿಂದ ಸೂರು ಕಟ್ಟಿಕೊಳ್ಳಬೇಕು. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಆಲೋಚಿಸುವುದು, ಬಯಸುವುದು ಸರಿಯಲ್ಲ. ಸರ್ಕಾರದ ಸಹಾಯಧನದಲ್ಲಿ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳುವ ಜಾಣ್ಮೆ ಜನರಲ್ಲಿ ಇರಬೇಕು.ಒಳ್ಳೆಯ ಬದುಕನ್ನು ಬದುಕುವ ವ್ಯಕ್ತಿ ಸಾಮಾಜಿಕ ಕಾರ್ಯಕರ್ತನೂ ಹೌದು, ದೇಶ ಭಕ್ತನೂ ಹೌದು. ಮನುಷ್ಯನ ಮನಸ್ಸು ಬದಲಾಗದೇ ದೇಶ ಬದಲಾಗಲು ಸಾಧ್ಯವಿಲ್ಲ. ಬದಲಾವಣೆ ಅಥವಾ ಅಭಿವೃದ್ಧಿ ಆರಂಭವಾಗಬೇಕಾಗಿರುವುದು ಮೊದಲು ಮನಸ್ಸಿನಿಂದ. ಶ್ರಮ ಸಂಸ್ಕೃತಿಯಿಂದ ಪ್ರತಿಯೊಬ್ಬರು ಅಭಿವೃದ್ಧಿ ಹೊಂದಬೇಕು ಎಂದು ಅವರು ಹೇಳಿದರು.

ಕಾಲೇಜು ಪ್ರಾಚಾರ್ಯೆ ಡಾ. ಉಮಾ ವಿ. ನೆರ್ಲೆ ಮಾತನಾಡಿದರು.

ಈ ಸಂದರ್ಭದಲ್ಲಿ ಆವಾಸ್ ಪರ್ ಸಂವಾದ ನೋಡಲ್ ಅಧಿಕಾರಿ ಡಾ. ಆರ್.ಜಿ ಕಡಪಟ್ಟಿ, ಕಾರ್ಯಗಾರಕ್ಕೆ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಟಿ ಬಾಗಲಕೋಟಿ, ನಾರಾಯಣ ಜಾಧವ ,ಮಲ್ಲಿಕಾರ್ಜುನ ಸೇರಿದಂತೆ ಸಂಸ್ಥೆಯ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]