Home / Top News / ಉಕ್ರೇನನಲ್ಲಿರುವ ನಮ್ಮ ದೇಶದ ಕಟ್ಟಕಡೆಯ ನಾಗರಿಕನನ್ನು ಕರೆತರುತ್ತೇವೆ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಉಕ್ರೇನನಲ್ಲಿರುವ ನಮ್ಮ ದೇಶದ ಕಟ್ಟಕಡೆಯ ನಾಗರಿಕನನ್ನು ಕರೆತರುತ್ತೇವೆ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Spread the love

ಧಾರವಾಡ : ರಷ್ಯಾ ಹಾಗೂ ಉಕ್ರೇನ ನಡುವಿನ ಯುದ್ದವೂ ತೀವ್ರತೆಯನ್ನು ಪಡೆದುಕೊಂಡಿದ್ದು,
ಈ ಹಿನ್ನೆಲೆಯಲ್ಲಿ ಉಕ್ರೇನನಲ್ಲಿರು ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಿ ಕರೆತರಲಾಗುತ್ತಿದೆ. ಈಗಾಗಲೇ ಆಪರೇಷನ್ ಗಂಗಾ ಮೂಲಕ ಕಾರ್ಯಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಈ ಕುರಿತು ಭಾರತ ಸರ್ಕಾರ, ಇಂಡಿಯನ್ ಆ್ಯಂಬಸಿ ಅಗತ್ಯ ಕ್ರಮಗಳನ್ನ ಕೈಗೊಂಡಿದೆ. ಭಾರತದ ಕೊನೆಯ ವ್ಯಕ್ತಿಯನ್ನ ದೇಶಕ್ಕೆ ಕರೆತರುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು‌ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಉಕ್ರೇನನಲ್ಲಿ‌ ಸಿಲುಕಿರುವ ಭಾರತೀಯ ಪ್ರಜೆಗಳನ್ನು ತವರಿಗೆ ಕರೆತರುವ ನಿಟ್ಟಿನಲ್ಲಿ ಈಗಾಗಲೇ ಇಂಡಿಯನ್ ಆ್ಯಂಬಸಿ ಬಾರ್ಡರ್‌ಗಳಲ್ಲಿ ಅಗತ್ಯ ಕ್ರಮವಹಿಸುತ್ತಿದೆ. ಪ್ರಧಾನಿ‌ ಮೋದಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಈಗಾಗಲೇ 14,000 ಸಾವಿರದಿಂದ 15,000 ಸಾವಿರ ಭಾರತೀಯರನ್ನು ತವರಿಗೆ ಕರೆತರಲಾಗಿದೆ. ಉಳಿದವರನ್ನು ಆದಷ್ಟು ಬೇಗ ಏರ್‌ಲಿಫ್ಟ್ ಮಾಡಲಾಗುವುದು ಎಂದರು.

*ಉಕ್ರೇನನಲ್ಲಿರುವ ಭಾರತೀಯರ ರಕ್ಷಣೆಗೆ ಇಂಡಿಯನ್ ಅ್ಯಂಬಸಿ ಉತ್ತಮ‌ವಾಗಿ ಕೆಕಸ ಮಾಡುತ್ತಿದೆ.*

ಉಕ್ರೇನನಿಂದ ಮರಳಿದ ವಿದ್ಯಾರ್ಥಿಯೋರ್ವ ಇಂಡಿಯನ್ ಆ್ಯಂಬಸಿ ಸೂಕ್ತವಾದ ವ್ಯವಸ್ಥೆ ಮಾಡಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯ ಉಕ್ರೇನನಲ್ಲಿ ಪರಿಸ್ಥಿತಿ ಭೀಕರತೆಯಿಂದ ಕೂಡಿದೆ. ಹಾಗಾಗಿ ಕೆಲವರಿಗೆ ತೊಂದರೆಯಾಗಿರಬಹುದು ಆದರೂ ಇಂಡಿಯನ್ ಆ್ಯಂಬಸಿ ಉಕ್ರೇನನಲ್ಲಿರುವರನ್ನ ಕರೆತರಲು ಪ್ರಯತ್ನಿಸುತ್ತಿದೆ. ಜೊತೆಗೆ ಪ್ರಧಾನಿ ಮೋದಿ ಅವರು ಸಹ ಮುತುವರ್ಜಿ ವಹಿಸಿ ಉಕ್ರೇನನಲ್ಲಿ ಸಿಲುಕಿರುವ ಭಾರತೀಯರನ್ನ ಕರೆತರಲು‌ ಪ್ರಯತ್ನಿಸುತ್ತಿದ್ದಾರೆ ಎಂದರು. ಹಾವೇರಿ ವಿದ್ಯಾರ್ಥಿ ನವೀನ ಮೃತದೇಹ ತರುವ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರು.

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]