Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ದೈಹಿಕ ಹಾಗೂ ಬೌದ್ಧಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ : ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಉಮೇಶ ಅಡಿಗ

ದೈಹಿಕ ಹಾಗೂ ಬೌದ್ಧಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ : ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಉಮೇಶ ಅಡಿಗ

Spread the love

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ದೈಹಿಕ ಚಟುವಟಿಕೆ ಅಗತ್ಯ‌. ದೈಹಿಕ ಹಾಗೂ ಬೌದ್ಧಿಕ ಆರೋಗ್ಯಕ್ಕೆ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಉಮೇಶ ಎಂ ಅಡಿಗ ಹೇಳಿದರು.

ಹುಬ್ಬಳ್ಳಿ ಹೊಸ ಸಿ.ಆರ್. ಮೈದಾನದಲ್ಲಿಂದು ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೊಲೀಸ್ ಇಲಾಖೆ ಕ್ರೀಡೆಗಳನ್ನು ಆಡಲು ಅವಕಾಶ ನೀಡಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ. ಕ್ರೀಡೆ ಏಕಾಗ್ರತೆ ಹಾಗೂ ಸ್ವಾಸ್ಥ್ಯಚಿತ್ತದಿಂದ ಕೆಲಸ ಮಾಡಲು ಸಹಕಾರಿ. ಒಲಂಪಿಕ್ ಕ್ರೀಡಾ ಕೂಟದಲ್ಲಿ ಒಂದು ನಿಮಿಷದ ಸಾಧನೆ ತೋರಲು ಹಲವು ವರ್ಷಗಳ ಪ್ರಯತ್ನಬೇಕು. ಜನರ ಸುರಕ್ಷತೆಯ ಜವಬ್ದಾರಿ ಪೊಲೀಸರ ಹೆಗಲ ಮೇಲಿದೆ. ಜನರು ಇಂದು ನೆಮ್ಮದಿಯಿಂದ ಇದ್ದಾರೆ ಎಂದರೆ ಅದಕ್ಕೆ ಪೊಲೀಸರು ಕಾರಣ. ವರ್ಷವಿಡೀ ಹಗಲಿರಳು ರಜೆ ಇಲ್ಲದೆ ಕೆಲಸ ನಿರ್ವಹಿಸುತ್ತೀರಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳವುದು ಕೂಡ ಮುಖ್ಯ. ಕ್ರೀಡೆಯಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಕ್ರೀಡೆಯಿಂದ ನಾವೆಲ್ಲರೂ ಒಂದೇ ಎನ್ನುವ ಭಾವನೆ ಬರುತ್ತದೆ. ದೇಶ, ಭಾಷೆ, ಜನಾಂಗದ ಭೇದ ಮರೆತು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತೇವೆ . ಕ್ರೀಡೆಯಲ್ಲಿ ನೀತಿ ನಿಯಮಗಳ ಪಾಲನೆ ಮುಖ್ಯ. ಹಾಗೇ ನಿತ್ಯ ಜೀವನದಲ್ಲಿ ಎಲ್ಲರೂ ನಿಯಮಗಳ ಪಾಲ‌ನೆ ಮಾಡಿದರೆ ಸಮಾಜ ಸುಭೀಕ್ಷವಾಗಿರುತ್ತದೆ ಎಂದು ನ್ಯಾಯಾದೀಶ ಉಮೇಶ್ ಎಂ ಅಡಿಗ ಅಭಿಪ್ರಾಯಪಟ್ಟರು. ಆರೋಗ್ಯವೇ ಭಾಗ್ಯ ಎಂಬ ನಾಣ್ನುಡಿಯಂತೆ ಆರೋಗ್ಯಕ್ಕಿಂತ ಹೆಚ್ಚಿನದು ಏನು ಇಲ್ಲ. ಸದಾ ಚಟುವಟಿಕೆಯಿಂದ ಇದ್ದು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು.ಪಾಲ್ಗೊಳ್ಳಲು ಹಣ ವ್ಯಯಿಸಬೇಕಿಲ್ಲ. ಪ್ರತಿಯೊಬ್ಬರು ವಯೋಮಾನಕ್ಕೆ ತಕ್ಕಂತೆ ದೈಹಿಕ ಚಟುವಟಿಕೆ ಮಾಡಬಹದು. ಸಧೃಡ ನಾಗರಿಕರೇ ಸಧೃಡ ದೇಶದ ನಿರ್ಮಾತೃಗಳು. ಈ ಹೊಸ ವರ್ಷದಲ್ಲಿ ನಿಮ್ಮೆಲರ ಆಶೋತ್ತರಗಳು ಈಡೇರಲಿ ಎಂದರು.

ಪೊಲೀಸ್ ಆಯುಕ್ತ ಲಾಭುರಾಮ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಪೊಲೀಸರು ಮಾನಸಿಕವಾಗಿ‌ ಹಾಗೂ ದೈಹಿಕವಾಗಿ ಸಧೃಡವಾಗಿರಬೇಕು. ಪ್ರತಿದಿನ ಒಂದು ಗಂಟೆ ವ್ಯಾಯಾಮ, ಯೋಗ, ಕ್ರೀಡೆಗಳಲ್ಲಿ ತೊಡಗಬೇಕು. ಕ್ರೀಡಾಕೂಟದಲ್ಲಿ ಮೂರು ದಿನಗಳ ಕಾಲ ಕ್ರೀಡಾ ಸ್ಪೂರ್ತಿಯೊಂದಿಗೆ ಭಾಗವಹಿಸಿ. ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದರು.

ಕ್ರೀಡಾಕೂಟದಲ್ಲಿ ಭಾಗವಹಿಸಿದ ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ಪಾರಿವಾಳ ಹಾಗೂ ಕೇಸರಿ, ಬಳಿ ಹಾಗೂ ಹಸಿರು ಬಲೂನುಗಳನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಸಶಸ್ತ್ರ ಮೀಸಲು ಪಡೆಯ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ ಮುರಾಳ ಪಥ ಸಂಚಲನ ಮುಂದಾಳತ್ವ ವಹಿಸಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೊಧಿಸಿದರು. ಸಶಸ್ತ್ರ ಮೀಸಲು ಪಡೆಯ ಈರಣ್ಣ ದೇಸಾಯಿ ಕ್ರೀಡಾಜ್ಯೋತಿ ಹಿಡಿದು ಓಡುವುದರ ಮೂಲಕ ಕ್ರೀಡಾಕೂಡಕ್ಕೆ ವಿಧ್ಯುಕ್ತ ಆರಂಭ ಒದಗಿಸಿದರು. ಸಿ.ಆರ್.ಉಪ ಪೊಲೀಸ್ ಆಯುಕ್ತ ಎಸ್.ವಿ.ಯಾದವ್ ಅವರು ವಂದಿಸಿದರು. ಸಿ.ಆರ್. ದಕ್ಷಿಣ, ಉತ್ತರ,
ಮಹಿಳಾ‌, ಧಾರವಾಡ ಹಾಗೂ ಸಂಚಾರ ವಿಭಾಗದ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ, ಆರ್.ಬಿ.ಬಸರಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]