Home / Top News / ಆನ್‌ಲೈನ್ ಪರೀಕ್ಷೆ ನಡೆಸಲು ಆಗ್ರಹಿಸಿ ಕಾನೂನು ವಿದ್ಯಾರ್ಥಿಗಳ ಧರಣಿ

ಆನ್‌ಲೈನ್ ಪರೀಕ್ಷೆ ನಡೆಸಲು ಆಗ್ರಹಿಸಿ ಕಾನೂನು ವಿದ್ಯಾರ್ಥಿಗಳ ಧರಣಿ

Spread the love

ಧಾರವಾಡ: ಆನ್‌ಲೈನ್ ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಕಾನೂನು ವಿದ್ಯಾರ್ಥಿಗಳು ಹುಬ್ಬಳ್ಳಿ, ಧಾರವಾಡ ಮಧ್ಯೆ ಇರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎದುರು ಧರಣಿ ನಡೆಸಿದ್ದಾರೆ.

ಏಕಾಏಕಿ ಪರೀಕ್ಷೆ ದಿನಾಂಕವನ್ನು ನಿಗದಿ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕಾನೂನು ವಿಶ್ವವಿದ್ಯಾಲಯ ಚೆಲ್ಲಾಟವಾಡುತ್ತಿದೆ ಎಂದು ವಿವಿ ಉಪಕುಲಪತಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇದೇ ರೀತಿ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ಮತ್ತು ಉಪಕುಲಪತಿಗಳ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಇದೀಗ ಆಫ್‌ಲೈನ್ ಪರೀಕ್ಷೆಗಳನ್ನು ನಡೆಸುವುದು ಬಿಟ್ಟು ಆನ್‌ಲೈನ್ ಮೂಲಕವೇ ಪರೀಕ್ಷೆ ನಡೆಸುವಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕಾನೂನು ವಿದ್ಯಾರ್ಥಿಗಳು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]