Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ದಿ. ೨೦ ರಿಂದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ

ದಿ. ೨೦ ರಿಂದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ

Spread the love

ಹುಬ್ಬಳ್ಳಿ : ೫೩೪ ನೇ ಕನಕ ಜಯಂತಿ ಅಂಗವಾಗಿ ಸಾಂಸ್ಕೃತಿಕ ನಗರಿ ಧಾರವಾಡ ಜಿಲ್ಲೆಯ ಸುಕ್ಷೇತ್ರ ಮನಸೂರಿನ ಜಗದ್ಗುರು ಶ್ರೀ ಮಠದ ವಿದ್ಯಾಪೀಠದ ಆಶ್ರಯದಲ್ಲಿ ಐದು ದಿನಗಳವರೆಗೆ ರಾಜ್ಯ ಮಟ್ಟದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ದಿ. ೨೦ ರಿಂದ ೨೪ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮನಸೂರು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾಮಠದದ ಶ್ರೀ ಬಸವರಾಜ ದೇವರು ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮನಸೂರು ಯಾಥ್ರಿ ಸಭಾಂಗಣದಲ್ಲಿ ಕನಕ ಪ್ರಶಸ್ತಿ ಪ್ರಧಾನ, ವಿವಿಧ ಕಲಾತಂಡಗಳ ಉತ್ಸವ, ಕವಿಗೋಷ್ಠಿ, ಕನಕ ಭಾಷಣ ಸ್ಪರ್ಧೆ, ಜವಳಿ ಇಲಾಖೆಯಿಂದ ಜವಳಿ ಉತ್ಪನ್ನ ವಸ್ತುಗಳ ಮಾರಾಟ ಮೇಳ, ವಿಚಾರ ಸಂಕೀರ್ಣ, ರಸಪ್ರಶ್ನೆ ಚರ್ಚೆ ಸೇರಿದಂತೆ ಸಮಾರೋಪ ಸಮಾರಂಭ ಜರುಗಲಿವೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ನಾಡಿನ ಮಠಾಧೀಶರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರುಗಳು, ಶಾಸಕರು, ಸಾಹಿತಿಗಳು, ಭಾಷಣಕಾರರು, ಚಲನಚಿತ್ರ, ರಂಗಭೂಮಿ ಕಲಾವಿದರು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು .

About Santosh Naregal

Check Also

ಮಾನವೀಯತೆ ಮೆರದ ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್

Spread the loveಹುಬ್ಬಳ್ಳಿ : ದ್ವಿಚಕ್ರ ವಾಹನ ಮೇಲಿಂದ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್ …

Leave a Reply

Your email address will not be published. Required fields are marked *

[the_ad id="389"]