Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ರಾಜ್ಯದ ಉಳಿದ ಅವಧಿಗೆ ಲಿಂಗಾಯತರೇ ಮುಖ್ಯಮಂತ್ರಿಗಳಾಗಲಿ ಲಿಂಗಾಯತ ಸಮಾಜದ ಮುಖಂಡ ಗಂಗಾಧರ ದೊಡವಾಡ

ರಾಜ್ಯದ ಉಳಿದ ಅವಧಿಗೆ ಲಿಂಗಾಯತರೇ ಮುಖ್ಯಮಂತ್ರಿಗಳಾಗಲಿ ಲಿಂಗಾಯತ ಸಮಾಜದ ಮುಖಂಡ ಗಂಗಾಧರ ದೊಡವಾಡ

Spread the love

ಲಿಂಗಾಯತ ನಾಯಕರಾದ ಬಿಎಸ್ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಲಿಂಗಾಯತ ಸಮಾಜದ ಮತಗಳನ್ನುಸೆಳೆದು ಅಧಿಕಾರಕ್ಕೆ ಬಂದಿರುವ ಕರ್ನಾಟಕದ ಬಿಜೆಪಿ ಸರಕಾರವು ಯಡಿಯೂರಪ್ಪನವರನ್ನು ಪದಚ್ಯುತಗೊಳಿಸಿ ಬೇರೆ ಜನಾಂಗದ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸುವ ಯಾವುದೇ ನೈತಿಕ ಹಕ್ಕು ಇಲ್ಲವೆಂದು ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡ್ಡವಾಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಈಗ ನೂತನ ಮುಖ್ಯ ಮಂತ್ರಿಗಳನ್ನು ಆಯ್ಕೆ ಮಾಡಿದಲ್ಲಿ ಲಿಂಗಾಯತ ಸಮುದಾಯದ ಅದರಲ್ಲೂ ಉತ್ತ ಕರ್ನಾಟಕದ ಅಭ್ಯರ್ಥಿಯನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿ ಲಿಂಗಾಯತರ ಋಣತೀರಿಸಲು ಭಾರತೀಯ ಜನತಾ ಪಕ್ಷ ಮುಂದಾಗಬೇಕೆಂದು ಹೇಳಿದ್ದಾರೆ. ಬಿಜೆಪಿಯ ಶಾಶಕಾಂಗ ಸಂಖ್ಯಾಬಲದಲ್ಲಿ ಲಿಂಗಾಯತರು ಅಧಿಕವಾಗಿದ್ದು ಮುಖ್ಯಮಂತ್ರಿ ಸ್ಥಾನ ಪಡೆಯಲು ಲಿಂಗಾಯತ ಸಮುದಾಯ ಅರ್ಹವಾಗಿದೆ ಎಂದು ಗಂಗಾಧರ ದೊಡವಾಡ ಪತ್ರಿಕಾಪ್ರಕಟಣೆ ತಿಳಿಸಿದ್ದಾರೆ.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]