Home / Top News / ರಾಜ್ಯದ ಮಾಜಿ ಸಿಎಂ ಜೋತಿಷ್ಯದ ಅಂಗಡಿ ತೆರೆದಿದ್ದಾರೆ- ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್

ರಾಜ್ಯದ ಮಾಜಿ ಸಿಎಂ ಜೋತಿಷ್ಯದ ಅಂಗಡಿ ತೆರೆದಿದ್ದಾರೆ- ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್

Spread the love

ಆಂಕರ್ : ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲು ಕಾಂಗ್ರೆಸ್‌ ನಾಯಕರಿಗೆ ನಿರುದ್ಯೋಗದ ಭಾವನೆ ಹುಟ್ಟಿಸಿದೆ. ಮುಂದಿನ ದಿನಮಾನಗಳಲ್ಲಿ ನಿರೋಧ್ಯೋಗಿಗಳಾಗ್ತಿವಿ ಅಂತ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ರಾಜ್ಯದ ಮಾಜಿ ಸಿಎಂ ಜೋತಿಷ್ಯದ ಅಂಗಡಿ ತೆರೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ನೇತೃತ್ವದಲ್ಲಿ ನಡೆದ, ಜಾನಾರ್ಶೀವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುವುದು ಕಾಂಗ್ರೆಸ್‌ನವರಿಗೆ ಗೊತ್ತಾಗಿದೆ. ಹಾಗಾಗಿ ಈಗ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳ ಜೋತಿಷ್ಯದ ಅಂಗಡಿ ತೆರೆದು ಭವಿಷ್ಯ ಹೇಳಲು ಶುರು ಮಾಡಿದ್ದಾರೆ. ಅಲ್ಲದೆ ಈಗಾಗಲೇ ಮುಂದಿನ ಸಿಎಂ ನಾನು, ಮುಂದಿನ ಮುಖ್ಯಮಂತ್ರಿ ನಾನು ಆಗುತ್ತೇನೆ ಎಂದು ಕಾಂಗ್ರೆಸ್ ಪಾರ್ಟಿಯಲ್ಲಿ, ಅಧಿಕಾರಕ್ಕೆ ಬರುವ ಮುಂಚಿತವಾಗಿ ಕಿತ್ತಾಟ ನಡೆಯುತ್ತಿದೆ. ಇದೇ ಜಗಳ ಬಿಜೆಪಿಯಲ್ಲಿ ಆರಂಭವಾಗುತ್ತೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿದ್ದರು. ಆದರೆ ಬಿಜೆಪಿ ಜಗಳದ ಪಾರ್ಟಿಯಲ್ಲ, ಸಾಮರಸ್ಯದ ಪಕ್ಷ ಎಂದು ಕುಟುಕಿದರು.

ಈಗಾಗಲೇ ಮಾಜಿ ಸಿಎಂ ಬಿಎಸ್‌ವೈ ಅವರು ಬರುವ ದಿನಗಳಲ್ಲಿ ರಾಜ್ಯವ್ಯಾಪಿ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರಕ್ಕೂ ಮಾರ್ಗದರ್ಶನ ಮಾಡುವ ಮೂಲಕ ಶಕ್ತಿಯನ್ನು ತುಂಬುವ ಕೆಲಸವನ್ನು ಬಿಎಸ್‌ ವೈ ಮಾಡುಲ್ಲೇ ಬರುತ್ತಿದ್ದಾರೆ. ಕಳೆದ ದಿನ ನಮ್ಮ ಸಿಎಂರವರು ಅಮೃತ ಯೋಜನೆ ಮೂಲಕ ರಾಜ್ಯ ಪರಿವರ್ತನೆ ಮಾಡುತ್ತೆನೆ ಎಂದು ಹೇಳಿದರೋ, ಆಗ ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೇ ದಾರಿ ಇದೆ, ಅದೂ ಭವಿಷ್ಯದ ಅಗಂಡಿ ಅಥವಾ ಮೋಸದ ಅಂಗಡಿ ತೆರೆಯುದಾಗಿದೆ ಎಂದು ಬಾಷಣದ ಉದಕ್ಕೂ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ನವರು ದೇಶವನ್ನ ಲೂಟಿ ಮಾಡುತ್ತಲೇ ಬಂದಿದ್ದರು. ಅದಕ್ಕಾಗಿ ಕೆಲವರು ತಿಹಾರ ಜೈಲಿನಲ್ಲಿ ಕುತ್ತಿದರು. ಬಳಿಕ ಅವರನ್ನು ಜೈಲಿನಿಂದ ಮೆರವಣಿಗೆ ಮಾಡುವ ಮೂಲಕ ಕರೆದುಕೊಂಡು ಬರಲಾಯಿತ್ತು ಎನ್ನುವ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರವರಿಗೂ ಟಾಂಗ್ ನೀಡಿದರು.

*ಪಾಲಿಕೆ ಚುನಾವಣೆಯನ್ನು ಎಚ್ಚರಿಕೆಯಿಂದ ಎದುರಿಸಲು ಸ್ವಪಕ್ಷೀಯ ನಾಯಕರಿಗೆ ಕಟೀಲ ಎಚ್ಚರಿಕೆ.*

ಈಗಾಗಲೇ ರಾಜ್ಯದಲ್ಲಿ ಹಲವು ಮಾಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗಿದೆ. ಅದನ್ನು ನಾವೆಲ್ಲರೂ ಎಚ್ಚರಿಕೆಯಿಂದ ಎದುರಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹು-ಧಾ ಅವಳಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ನೀಡಿದೆ. ಕೋಟಿ ಕೋಟಿ ಅನುದಾನ ಕೇಂದ್ರದಿಂದ ಬಂದಿದೆ. ಸರ್ಕಾರದ ಯೋಜನೆಗಳನ್ನು ಅವಳಿನಗರದ ಜನತೆಗೆ ತಿಳಿಸುವುದರ ಜೊತೆಗೆ, ಮತ್ತೆ ಪಾಲಿಕೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಅವಳಿನಗರ ಬಿಜೆಪಿ ಜನಪ್ರತಿನಿಧಿಗಳಿಗೆ ಇದೆವೇಳೆ ಪರೋಕ್ಷವಾಗಿ ಸೂಚನೆ ನೀಡಿದರು.

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]