Home / Top News / ಪ್ರೇಮ ಪ್ರಕರಣ : ಮಾಜಿ ಪ್ರೇಮಿಯಿಂದ ಯುವಕನ ಹತ್ಯೆ

ಪ್ರೇಮ ಪ್ರಕರಣ : ಮಾಜಿ ಪ್ರೇಮಿಯಿಂದ ಯುವಕನ ಹತ್ಯೆ

Spread the love

ಹುಬ್ಬಳ್ಳಿ: ತ್ರಿಕೋನ್ ಪ್ರೇಮ ಕಹಾನಿಯೊಂದು ಒಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.‌

ಹೌದು, ಹುಬ್ಬಳ್ಳಿಯ ನವನಗರ ಠಾಣೆ ವ್ಯಾಪ್ತಿಯ ಸುತ್ತಗಟ್ಟಿಯ ಹೊರವಲಯದಲ್ಲಿ ಯುವಕನ ಹತ್ಯೆ ಆಗಿದ್ದು ,ಹಳೆ ಹುಬ್ಬಳ್ಳಿಯ ನೇಕಾರ ನಗರ  ಮೂಲದ ವಿನಯ್ ಹತ್ಯೆಯಾದ ಯುವಕನಾಗಿದ್ದಾನೆ. ಕಳೆದ ದಿನ ಯುವತಿಯ ಮಾಜಿ ಪ್ರೇಮಿ ಹುಬ್ಬಳ್ಳಿ ನವನಗರದ ರಾಘವೇಂದ್ರ 20 ವರ್ಷದ ವಿನಯ್ ನನ್ನು ಮಾತುಕತೆ ನೆಪದಲ್ಲಿ ಕರೆಸಿ , ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದನು.

ಇನ್ನು ವಿನಯ್ ಕಾಣೆ ಆಗುತ್ತಿದ್ದಂತೆ ಪೋಷಕರು ಪೊಲೀಸರ ಮೊರೆ ಹೋದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಕೊಲೆಯಾದ 24 ಗಂಟೆಯಲ್ಲಿ ಕೊಲೆ ಆರೋಪಿಯನ್ನ ತಕ್ಷಣ ಬಂಧಿಸಿರುವ ನವನಗರ ಠಾಣೆ ಪೊಲೀಸರು ಆರೋಪಿ ರಾಘವೇಂದ್ರನನ್ನು ಬಂಧಿಸಿ
ವಿಚಾರಣೆ ನಡೆಸುತ್ತಿದ್ದಾರೆ. ವಿನಯನ ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

About Santosh Naregal

Check Also

ವಾಣಿಜ್ಯ ನಗರಿಯಲ್ಲಿ ಅಪರಾದ ಕೃತ್ಯ ಹಿನ್ನೆಲೆಯಲ್ಲಿ ರೌಡಿ ಪರೇಡ್

Spread the loveಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಚಟುವಟಿಕೆಗಳ ಹೆಚ್ಚಳ ಹಿನ್ನೆಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ …

Leave a Reply

Your email address will not be published. Required fields are marked *

[the_ad id="389"]