Home / Top News / ಮಹದಾಯಿ ಕಾಮಗಾರಿಯನ್ನು ಅದಷ್ಟು ಬೇಗ ಮುಖ್ಯಮಂತ್ರಿಗಳು ಆರಂಭಿಸುವ ಭರವಸೆ ಇದೆ: ಹಾಲಪ್ಪ ಅಚಾರ್

ಮಹದಾಯಿ ಕಾಮಗಾರಿಯನ್ನು ಅದಷ್ಟು ಬೇಗ ಮುಖ್ಯಮಂತ್ರಿಗಳು ಆರಂಭಿಸುವ ಭರವಸೆ ಇದೆ: ಹಾಲಪ್ಪ ಅಚಾರ್

Spread the love

ಧಾರವಾಡ : ಮಹದಾಯಿ ಕಾಮಗಾರಿ ಆರಂಭಿಸಬೇಕು‌ ಎಂಬುವುದ ಉತ್ತರ ಕರ್ನಾಟಕದ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಅದಕ್ಕಾಗಿಯೇ ನಮ್ಮ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪನವರು ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದುಡ್ಡು ಕೂಡಾ ತೆಗೆದು ಇಟ್ಟಿದ್ದಾರೆ. ಬರುವ ದಿನಗಳಲ್ಲಿ ಮಹದಾಯಿ ಕಾಮಗಾರಿ ಆರಂಭಿಸಲು ಇರುವ ಸಮಸ್ಯೆಗಳನ್ನು ಪರಿಹಾರ ಮಾಡಿ ಆದಷ್ಟು ಬೇಗ‌ ಕಾಮಗಾರಿ ಆರಂಭಿಸುವ ಭರವಸೆ ಇದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ‌ ಮಾತನಾಡಿದ ಅವರು, ಈಗಾಗಲೇ ಮಹದಾಯಿ ಕಾಮಗಾರಿಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಮೊದಲ ಬಜೆಟ್‌ನಲ್ಲಿ 1ಸಾವಿರ ಕೋಟಿ ರೂಪಾಯಿನ್ನು ಮೀಸಲಿಟ್ಟಿದ್ದಾರೆ. ಜೊತೆಗೆ ಇದು‌ ಸಿಎಂ ತವರು ಜಿಲ್ಲೆಯ ಬಹು ಬೇಡಿಕೆಯ ಕಾಮಗಾರಿಯಾಗಿದೆ. ಇದರ ಬಗ್ಗೆ ನಮ್ಮ ಮುಖ್ಯಮಂತ್ರಿಗಳಿಗೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಆದಷ್ಟು ಬೇಗ‌ಇರುವ ಸಮಸ್ಯೆಗಳ ಪರಿಹಾರ‌ ಮಾಡಿ ಯೋಜನೆಯ ಕಾಮಗಾರಿ ಆರಂಭಿಸಲಾಗುವುದು ಎಂದರು.

*ಬಜೆಟ್‌ನಲ್ಲಿ ನೀರಾವರಿ ಯೋಜನೆಗಳ ಕುರಿತು ಹೆಚ್ಚು ಒತ್ತು ನೀಡಲಾಗಿದೆ.*

ಕಳೆದ ದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ಯರು ಮಂಡನೆ ಮಾಡಿರುವ ಬಜೆಟ್‌ನಲ್ಲಿ ನೀರಾವರಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಹದಾಯಿ,ಮೇಕೆದಾಟು ಹಾಗೂ ಕೃಷ್ಣ ಯೋಜನೆಗೆ ಸೇರಿದಂತೆ ರಾಜ್ಯ ಪ್ರತಿಯೊಂದು ನೀರಾವರಿ ಯೋಜನೆಗಳಿಗೆ ವಿಶೇಷ ಒತ್ತು ನೀಡಿ ಹಣ ಕೂಡ ಮೀಸಲಿಡಕಾಗಿದೆ.‌ ಹಾಗಾಗಿ ರಾಜ್ಯ ಸರ್ಕಾರದ ಪ್ರಸಕ್ತ ವರ್ಷ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳ ಅನಿಷ್ಠಾನಕ್ಕೆ ಒತ್ತು ನೀಡಲಾಗಿದರ ಎಂದು ತಿಳಿಸಿದರು. ‌

*ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆಗೆ ಹಾಲಪ್ಪ ಆಚಾರ ತಿರುಗೇಟು.*

ರಾಜ್ಯ ಸರ್ಕಾರಕ್ಕೆ ಉತ್ತಮ ಆಡಳಿತ ನಡೆಸುವ ಆಸಕ್ತಿ ಇಲ್ಲ, ಬರೀ ದುಡ್ಡು ಹೊಡೆಯಿವಿದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬ ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆಯವರ ಕಲಬುರ್ಗಿಯಲ್ಲಿನ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿ, ಈ ಹಿಂದೆ ಅವರು ಎಷ್ಟು ಉತ್ತಮ ಆಡಳಿತ ನೀಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿಯೇ ಅವರನ್ನು ಈಗ ರಾಜ್ಯದ ಮತದಾರರು ಅಧಿಜಾರದಿಂದ ದೂರು ಇಟ್ಟಿದ್ದಾರೆ. ಈಗ ನಾವು ಹೇಗೆ ಆಡಳಿತ ನಡೆಸಬೇಕು ಎಂಬುವುದು ಅವರಿಂದ ನಾವು ಕಲಿಯಬೇಕಿಲ್ಲ ಎನ್ನುವ ಮೂಲಕ ಪ್ರಿಯಾಂಕ ಖರ್ಗೆಯವರಿಗೆ ತಿರುಗೇಟು ನೀಡಿದರು.

About Santosh Naregal

Check Also

ಸಾರ್ವಜನಿಕ ಗಣೇಶ ಮಂಡಳಿಗಳಿಗೆ 2 ಕೆಜಿ ಬೆಳ್ಳಿ ನಾಣ್ಯಗಳು ವಿತರಣೆಗೆ : ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಚಾಲನೆ

Spread the loveಹುಬ್ಬಳ್ಳಿ : ನಗರದಲ್ಲಿಂದು ಇದೇ ಮೊದಲ ಬಾರಿಗೆ ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ಅಯೋಜಿಸಿದ 200 ಸಾರ್ವಜನಿಕರ ಗಣೇಶ …

Leave a Reply

Your email address will not be published. Required fields are marked *

[the_ad id="389"]