Spread the love
ಹುಬ್ಬಳ್ಳಿ : ನಾಳೆ ಪ್ರತಿಭಟನೆ ನಡೆಸಲು ಪೂರ್ವಭಾವಿ ಸಭೆ ನಡೆಸಿದ ಬಿಜೆಪಿಗರಿಗೆ ಕಾಂಗ್ರೆಸ್ ಗುಲಾಬಿ ಹೂವು ನೀಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆಯಿತು
ಆದಾಗ್ಯೂ ಕೆಲವು ಕಾರ್ಯಕರ್ತರು ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದರು. ಪರಿಣಾಮ ಕೆಲಕಾಲ ಹೈಡ್ರಾಮಾ ಕೂಡಾ ನಡೆಯಿತು. ಆಗ ಪೋಲಿಸರು ಕಾರ್ಯಕರ್ತರನ್ನು ಬಂಧಿಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿಯನ್ನು ಎಳೆದು ಪೋಲಿಸ್ ವಾಹನಕ್ಕೆ ಹತ್ತಿಸಿದ ಘಟನೆಯೂ ನಡೆಯಿತು.