Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಪರಿಷತ್ ಚುನಾವಣೆಯಲ್ಲಿ ಪ್ರದೀಪ ಶೆಟ್ಟರ ಅವರಿಗೆ ಕುರುಬ ಸಮಾಜದ ಮತಗಳನ್ನು ಅವರಿಗೆ ನೀಡಿ : ಶಿವಾನಂದ ಮುತ್ತಣ್ಣವರ ಮನವಿ

ಪರಿಷತ್ ಚುನಾವಣೆಯಲ್ಲಿ ಪ್ರದೀಪ ಶೆಟ್ಟರ ಅವರಿಗೆ ಕುರುಬ ಸಮಾಜದ ಮತಗಳನ್ನು ಅವರಿಗೆ ನೀಡಿ : ಶಿವಾನಂದ ಮುತ್ತಣ್ಣವರ ಮನವಿ

Spread the love

ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣೆಯಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕೆಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಒತ್ತಾಯಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈಗಾಗಲೇ ಒಂದು ಅವಧಿಗೆ ಕೆಲಸ ನಿರ್ವಹಿಸಿರುವ ಶೆಟ್ಟರ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವಿಭಜಿತ ಧಾರವಾಡ ಜಿಲ್ಲೆಯ ಕುರುಬ ಸಮಾಜದ ಎಲ್ಲ ಮತಗಳನ್ನು ಅವರಿಗೆ ನೀಡುವಂತೆ ಈಗಾಗಲೇ ಕ್ಷೇತ್ರಧ್ಯಾಂತ ಸಂಚರಿಸಿ ಮತದಾರರಿಗೆ ಮನವಿ ಮಾಡಲಾಗುತ್ತಿದೆ ಎಂದರು.

ಈಗಾಗಲೇ ಕುಂದಗೋಳ, ಕಲಘಟಗಿ, ಹುಬ್ಬಳ್ಳಿ, ಧಾರವಾಡ ಗ್ರಾಮಾಂತರ ಪ್ರದೇಶದಲ್ಲಿ ಮತಯಾಚನೆ ಮಾಡಲಾಗಿದ್ದು, ಡಿ.7 ರಂದು ಗದಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮತಯಾಚನೆ ಮಾಡಲಾಗುವುದು. ಡಿ.8 ರಂದು ಹಾವೇರಿ ಜಿಲ್ಲೆಯ ತಾಲೂಕುಗಳಲ್ಲಿ ಮತಯಾಚನೆ ಮಾಡಲಾಗುವುದು. ಈ ಚುನಾವಣೆಯಲ್ಲಿ ಪ್ರದೀಪ ಶೆಟ್ಟರ ಅವರು 5 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯ ಸಾಧಿಸಲಿದ್ದಾರೆ ಎಂದು ಭರವಸೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಯಲ್ಲಪ್ಪ ಕುಂದಗೋಳ, ಬೀರಪ್ಪ ಡೊಳ್ಳಿನ, ಸಿದ್ದಣ್ಣ ವಾಲಿಕಾರ, ಈಶ್ವರ ಜಟ್ಟೆಪ್ಪನವರ, ಹನುಮಂತಪ್ಪ ತಿಪ್ಪಣ್ಣವರ, ಕರೆಪ್ಪ ಕಂಬಳಿ ಇದ್ದರು.

About Santosh Naregal

Check Also

101 ಚೀಲ ಅಕ್ಕಿ ಸಿದ್ಧಾರೂಢ ಮಠಕ್ಕೆ ಸಮರ್ಪಣೆ ಮಾಡಿದ ಜೆ ಜಿ ಕಾಲೇಜ್ ಎನ್ಎಸ್ಎಸ್ ಕಾರ್ಯಕರ್ತರ

Spread the loveಹುಬ್ಬಳ್ಳಿ – ಹನಿ ಹನಿ ಕೂಡಿದರೆ ಹಳ್ಳ ಅಂತಾರೆ. ಅದರಂತೆ ಹುಬ್ಬಳ್ಳಿಯ ವಿದ್ಯಾರ್ಥಿಗಳು ಒಂದು ಮುಷ್ಟಿ ಅಕ್ಕಿ …

Leave a Reply

Your email address will not be published. Required fields are marked *