Home / Top News / ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ

ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ

Spread the love

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಗೊಕುಲ ರಸ್ತೆಯಲ್ಲಿರುವ ಗ್ರೀನ ಗಾರ್ಡನ್ ಕಾಲೋನಿಯ ಶ್ರೀ ಕರೆಯಮ್ಮ ದೇವಸ್ಥಾನದ ಅರ್ಚಕಾದ ಮಂಜುನಾಥ ಹೆಬ್ಬಾರ ಅವರ ಮೇಲೆ ಸಂದೀಪ ಜಡಿ ಹಾಗೂ ರೇಶ್ಮಾ ಜಡಿ ಎಂಬುವರು ಹಲ್ಲೆ ಮಾಡಿದ್ದಾರೆ.

ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವ ಹಿನ್ನಲೆಯಲ್ಲಿ ದೇವಸ್ಥಾನ ದ ಮುಂದೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ದೇವಸ್ಥಾನ ಅರ್ಚಕರು, ಗಾರ್ಡನಲ್ಲಿರುವ ಕರಕಿಯನ್ನು ತುಳಿಯಬೇಡಿ ಅದನ್ನು ದೇವರಿಗೆ ಬಳಸುತ್ತೇವೆ ಎಂದು ಹೇಳಿದ್ದಕ್ಕೆ ಅರ್ಚಕರ ವಿರುದ್ದ ಜಗಳವಾಡಿದ್ದರು..

ಮಾರನೇ ದಿನ ಅಂದರೆ, ನವೆಂಬರ್ ೨ ರಂದು ದೇವಸ್ಥಾನ ಕ್ಕೆ ಬಂದು ಜಡಿ ಕುಟುಂಬದವರು ಅರ್ಚಕರ ಜೋತೆ ಜಗಳ ತೆಗೆದಿದ್ದಾರೆ‌. ಜಡಿ ಕುಟುಂಬಕದವರು ಸ್ಥಳಿಯ ಕಾರ್ಪೋರೆಟ್ ರ ಅವರ ಕುಮ್ಮಕ್ಕಿನಿಂದ ದೇವಸ್ಥಾನ ದ ಅರ್ಚಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಅಷ್ಟೇಯಲ್ಲ ಪ್ರದೀಪ‌ ಜಡಿ ಅವರು ದೇವಸ್ಥಾನ ದ ಪೂಜೆರಿ ಅವರಿಗೆ ಜೀವ ಬೆದರಿಕೆ ಹಾಕಿದ್ದರು.ಈ ಕುರಿತಂತೆ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿದ್ದರು.ಆದ್ರೆ ಸ್ಥಳಿಯ ಕಾರ್ಪೋರೇಟರ್ ಸರಸ್ವತಿ ದೂಂಗಡಿ ಅವರ ಪತಿ ವಿನಾಯಕ ದೂಂಗಡಿ ಅವರು ಪೋಲಿಸರ್ ಮದ್ಯಸ್ಥಿಕೆಯಲ್ಲಿ ಎಲ್ಲರನ್ನು ಸೇರಿಸಿ ರಾಜಿ ಮಾಡಿಸಿದ್ದಾರೆ.

ಆದ್ರೆ ಈ ಘಟನೆ ನಂತರ ಅರ್ಚಕರು ದೇವಸ್ಥಾನಕ್ಕೆ ಬರುತ್ತಿಲ್ಲ.ದೇವಸ್ಥಾನ ದ ಕಮೀಟ ಅವರು ಅರ್ಚಕರು ತಿಂಗಳಿಗೆ ೬ ಸಾವಿರ‌ ರೂಪಾಯಿ ನ್ನು ನೀಡುತ್ತಾರೆ.ಇದರಿಂದ ಅರ್ಚಕ ಮಂಜುನಾಥ ಅವರು ತಮ್ಮ ತಾಯಿಯ ಜೊತರ ಜೀವನ ಸಾಗಿಸುತ್ತಿದ್ದಾರೆ.
ಸ್ಥಳಿಯ ಭಕ್ತರೆಲ್ಲರೂ ಅರ್ಚಕರನ್ನು ಮರಳಿ ದೇವಸ್ಥಾನ ಕ್ಕೆ ಬನ್ನಿ ಎಂದು ಹೇಳುತ್ತಿದ್ದಾರೆ.

 

ಜಾಹಿರಾತು…

About Santosh Naregal

Check Also

ಸಾರ್ವಜನಿಕ ಗಣೇಶ ಮಂಡಳಿಗಳಿಗೆ 2 ಕೆಜಿ ಬೆಳ್ಳಿ ನಾಣ್ಯಗಳು ವಿತರಣೆಗೆ : ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಚಾಲನೆ

Spread the loveಹುಬ್ಬಳ್ಳಿ : ನಗರದಲ್ಲಿಂದು ಇದೇ ಮೊದಲ ಬಾರಿಗೆ ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ಅಯೋಜಿಸಿದ 200 ಸಾರ್ವಜನಿಕರ ಗಣೇಶ …

Leave a Reply

Your email address will not be published. Required fields are marked *

[the_ad id="389"]