Home / Top News / ಬಿಟ್ ಕಾಯಿನ್ ಸತ್ಯ ಹೊರ ಬಂದ್ರೆ ಸರ್ಕಾರ ಉಳಿಯುತ್ತಾ : ಸಿದ್ದರಾಮಯ್ಯ ವ್ಯಂಗ್ಯ

ಬಿಟ್ ಕಾಯಿನ್ ಸತ್ಯ ಹೊರ ಬಂದ್ರೆ ಸರ್ಕಾರ ಉಳಿಯುತ್ತಾ : ಸಿದ್ದರಾಮಯ್ಯ ವ್ಯಂಗ್ಯ

Spread the love

ಹುಬ್ಬಳ್ಳಿ : ಬಿಟ್ ಕಾಯಿನ್ ಸತ್ಯ ಹೊರ ಬಂದ್ರೆ ಸರ್ಕಾರ ಉಳಿಯುತ್ತಾ.? ಮುಖ್ಯಮಂತ್ರಿಗಳು ಯಾಕೆ ಅದನ್ನು ಮುಚ್ಚಿಹಾಕಲು ಪ್ರಯತ್ನ ಮಾಡತೀರೋದು..? ಮುಖ್ಯಮಂತ್ರಿಗಳು ಯಾಕೆ ಸುಳ್ಳು ಹೇಳತೀರೋದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಶ್ನೆ ಹಾಕಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,
ಬಿಜೆಪಿಯವರು ಇದರಲ್ಲಿ ಭಾಗಿಯಾಗಿದ್ರೆ ಅವರ ಸರ್ಕಾರ ಹೋಗಲ್ವಾ..? ಬಿಟ್ ಕಾಯಿನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ.ಯಾವುದೇ ಪಕ್ಷದವರು ಇರಲಿ ತನಿಖೆ ಮಾಡಿ ಶಿಕ್ಷೆ ಕೊಡಿಸಿ. ಪ್ರಭಾವಿ.. ಪ್ರಭಾವಿ.. ನಾಯಕರಿದ್ದಾರೆ ಅಂತ ನನಗೆ ಗೊತ್ತು. ಮೊದಲು ಅವರು ಹೇಳಲಿ ಅಂತ ಇದೀನಿ.
ಬಿಡ್ ಕಾಯಿನ್ ನಲ್ಲಿ ಯಾರೆಲ್ಲ ಬಾಗಿಯಾಗಿದ್ದಾರೆ ತನಿಖೆಯಾಗಲಿ. ಅಪರಾಧಿಗಳಿಗೆ ರಕ್ಷಣೆ ಇರಬಾರದು, ತಪ್ಪು ಮಾಡಿದವರು ಶಿಕ್ಷೆ ಆಗಲಿ.
ದಾಖಲೆ ಕೊಡಿ‌.. ದಾಖಲೆ ಕೊಡಿ. ಅಂದ್ರೆ ಏನ್ ಅರ್ಥ..?
ತನಿಖೆ ಮಾಡುವ ಸ್ಥಾನದಲ್ಲಿ ಅವರಿದ್ದಾರೆ ಎಂದರು.

ಬಿಟ್ ಕಾಯಿನ್ ವಿಚಾರ ತಲೆಕಡೆಸಿಕೊಳ್ಳಬೇಡಿ ಎಂದು ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು,
ಪ್ರಧಾನಮಂತ್ರಿಗಳಾದವರು ಬಿಟ್ ಕಾಯಿನ್ ವಿಚಾರ ಅಷ್ಟೊಂದು ಲಘುವಾಗಿ ಮಾತನಾಡಬಾರದು.
ಸಿಎಮ್ ಆಗಲಿ ಪಿಎಂ ಆಗಲಿ ಜವಾಬ್ದಾರಿಯಿಂದ ಹೇಳಬೇಕು.ಸತ್ಯ ಹೊರಬರಬೇಕು ಎಂದರು.

ಬೊಮ್ಮಾಯಿ ಆಡಳಿತದ ಸರ್ಕಾರಕ್ಕೆ ನೂರು ದಿನದ ಬಗ್ಗೆ ‌ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ,
ಮೋದಿಯವರು ಏನ್ ಹೇಳಿದ್ದಾರೆ ಯಾರಿಗೂ ಗೊತ್ತಿಲ್ಲ.
ಮುಖ್ಯಮಂತ್ರಿ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.
ಸಿಎಂ‌ಹೇಳಿಕೊಂಡಿದ್ದು ಅಲ್ವಾ..? ಮೋದಿ ಎಲ್ಲಿ ಹೇಳಿದ್ದಾರೆ.ಮೋದಿಯವರು ಹೇಳಿದ್ದಾರೆ ಅಂತ ಸಿಎಂ ಹೇಳಿಕೊಂಡಿದ್ದಾರೆ. ಮೋದಿ ಆ ತರಹ ಹೇಳಿದ್ದಾರೋ ಇಲ್ವೋ..? ಯಾರಿಗೆ ಗೊತ್ತು. ಸರ್ಕಾರ ಬೀಳುತ್ತೆ ಎಂಬ ಭಯ ಇದ್ದರು ಇರಬಹುದು..? ಕಾಂಗ್ರೆಸ್ ನವರು ಇದ್ದರೆ ಶಿಕ್ಷೆ ಆಗಲಿ ಎಂದರು.

 

ಜಾಹಿರಾತು…

 

About Santosh Naregal

Check Also

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

Spread the loveಹುಬ್ಬಳ್ಳಿ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಹೊರವಲಯದಲ್ಲಿ …

Leave a Reply

Your email address will not be published. Required fields are marked *

[the_ad id="389"]