Home / Top News / ರಸ್ತೆ ದಾಟುವ ವೇಳೆ ವ್ಯಕ್ತಿ ಮೇಲೆ ಹರಿದ ಲಾರಿ: ಸ್ಥಳದಲ್ಲಿಯೇ ಸಾವು

ರಸ್ತೆ ದಾಟುವ ವೇಳೆ ವ್ಯಕ್ತಿ ಮೇಲೆ ಹರಿದ ಲಾರಿ: ಸ್ಥಳದಲ್ಲಿಯೇ ಸಾವು

Spread the love

ಹುಬ್ಬಳ್ಳಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಹರಿದ ಪರಿಣಾಮ ವ್ಯಕ್ತಿಯೋರ್ವನು ಸ್ಥಳದಲ್ಲಿಯೇ ಮೃತಪಟ್ಟ ಘಟನೆ

ಹುಬ್ಬಳ್ಳಿಯ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿಯಲ್ಲಿ ನಡೆದಿದೆ.

ರಸ್ತೆ ದಾಟುತ್ತಿದ್ದಾಗ ಲಾರಿ ಪಾದಚಾರಿ ಮೇಲೆ ಹರಿದು ಈ ಘಟನೆ ನಡೆದಿದೆ. ಇನ್ನೂ ಮೃತಪಟ್ಟ ವ್ಯಕ್ತಿ ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.‌ ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕೀಮ್ಸ್ ಶವಾಗರಕ್ಕೆ ರವಾನೆ ಮಾಡಲಾಗಿದೆ.

ಈ ಸಂಬಂಧ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಅಪಘಾತ ಪಡಿಸಿದ ಲಾರಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣವನ್ನು ದಾಖಲು ಮಾಡಿದ್ದಾರೆ.

 

ಜಾಹಿರಾತು….

About Santosh Naregal

Check Also

ಮೇಲ್ಮನೆ ಚುನಾವಣೆ: ಕಾಂಗ್ರೆಸ್ ಗೆಲುವು ನಿಶ್ಚಿತ-ಹರಿಪ್ರಸಾದ

Spread the loveಹುಬ್ಬಳ್ಳಿ,  : ಹಾನಗಲ್ ಉಪ ಚುನಾವಣೆಯಲ್ಲಿ ಮತದಾರರು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ …

Leave a Reply

Your email address will not be published. Required fields are marked *