Home / ಕ್ರೈಮ್ ಸುದ್ದಿ / ಬೈಕ್ ಕಳ್ಳರ ಹಾವಳಿ : ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಬೈಕ್ ಕಳ್ಳರ ಹಾವಳಿ : ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

Spread the love

ಧಾರವಾಡ : ನಗರದ ಮಾಳಾಪುರ ಹಾಗೂ ಸೈದಾಪುರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನ ಕಳ್ಳರ ತಮ್ಮ ಕೈಚಳಕ ತೋರಿಸಿ ರಾತ್ರೋರಾತ್ರಿ ಎಸ್ಕೆಪ್ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು , ಈ ದೃಶ್ಯ ಎಲ್ಲರ ನಿದ್ದೆ ಗೆಡಿಸುವಂತೆ ಮಾಡಿದೆ . ನಗರದ ವಿವಿಧ ಬಡಾವಣೆಗಳಲ್ಲಿ ರಾತ್ರಿಯಿಡೀ ಬೈಕ್‌ಗಳನ್ನ ಹುಡುಕುವ ಬೈಕ್ ಕಳ್ಳರ ಗ್ಯಾಂಗ್ , ಯಾರೂ ಇಲ್ಲದ ಸಮಯದಲ್ಲಿ ಬೈಕ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ . ಜನರ ನಿದ್ದೆಗೆಡಿಸುವ ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ . ಈ ಹಿಂದೆಯೂ ಸಹ ಬೈಕ್ ಗಳನ್ನ ಕದ್ದು ಪರಾರಿಯಾಗಿರುವ ಪ್ರಕರಣ ನಡೆದಿತ್ತು . ಈಗ ಮತ್ತೆ ಹಲವು ಬೈಕ್ ಗಳು ಕಳ್ಳತನ ಆಗುತ್ತಿರುವುದರಿಂದ ಧಾರವಾಡ ಜನ ಆತಂಕದಲ್ಲಿದ್ದಾರೆ . ಹಾಗೂ ಈ ಭಾಗದಲ್ಲಿ ಪೊಲೀಸರ ಬೀಟ್ ಹೆಚ್ಚಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ .

 

ಜಾಹಿರಾತು…..

 

About Santosh Naregal

Check Also

ಮೇಲ್ಮನೆ ಚುನಾವಣೆ: ಕಾಂಗ್ರೆಸ್ ಗೆಲುವು ನಿಶ್ಚಿತ-ಹರಿಪ್ರಸಾದ

Spread the loveಹುಬ್ಬಳ್ಳಿ,  : ಹಾನಗಲ್ ಉಪ ಚುನಾವಣೆಯಲ್ಲಿ ಮತದಾರರು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ …

Leave a Reply

Your email address will not be published. Required fields are marked *