Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಅಪ್ಸರಾ ಚಿತ್ರಮಂದಿರದಲ್ಲಿ ನಟ ಪುನೀತ್​ ರಾಜಕುಮಾರ್​ಗೆ ಶ್ರದ್ಧಾಂಜಲಿ

ಅಪ್ಸರಾ ಚಿತ್ರಮಂದಿರದಲ್ಲಿ ನಟ ಪುನೀತ್​ ರಾಜಕುಮಾರ್​ಗೆ ಶ್ರದ್ಧಾಂಜಲಿ

Spread the love

ಹುಬ್ಬಳ್ಳಿ; ನಗರದ ಅಪ್ಸರಾ ಚಿತ್ರಮಂದಿರದಲ್ಲಿ ನಟ ಪುನೀತ್​ ರಾಜಕುಮಾರ್​ಗೆ ಶ್ರದ್ಧಾಂಜಲಿ ಕಾರ್ಯಕ್ರಮ ಭಾನುವಾರ ನಡೆಯಿತು. . ಚಿತ್ರ ಪ್ರದರ್ಶಕರ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾಜ್ಯದ 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪುನೀತ್​ಗೆ ನಮನಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ಚಿತ್ರ ಪ್ರದರ್ಶಕರು ನಟ ಪುನೀತ್‌ರಾಜ್‌ಕುಮಾರ್‌ಗೆ ನಮನ ಸಲ್ಲಿಸಲಿದ್ದು ಅದರಂತೆ ಸಹ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಗೀತಾಂಜಲಿ, ಚಿತ್ರಮಂದಿರಗಳಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನದ ಮೂಲಕ ಪುಷ್ಪಾಂಜಲಿ ಹಾಗೂ ಥಿಯೇಟರ್‌ಗಳಲ್ಲಿ ಕ್ಯಾಂಡಲ್ ಹಚ್ಚಿ ದೀಪಾಂಜಲಿ ನಡೆಸಲಾಯಿತು ‌. ಮೌನಾಚರಣೆ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ಥಿಯೇಟರ್ ಸಿಬ್ಬಂದಿ ಹಾಗೂ ಅಭಿಮಾನಿಗಳಿಂದ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದರು. ಪಾಲಿಕೆ ಮಾಜಿ ಸದಸ್ಯ ಪುನೀತ್ ರಾಜ್‍ಕುಮಾರ್ ಅಭಿಮಾನಿ ಶಿವಾನಂದ ಮುತ್ತಣ್ಣವರ,‌ಚಿತ್ರಮಂದಿರದ ವ್ಯವಸ್ಥಾಪಕ ಶಿವಾನಂದ ಚಿತ್ರಮಂದಿರದ ಸಿಬ್ಬಂದಿ ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

 

 

ಜಾಹಿರಾತು……

About Santosh Naregal

Check Also

ಮೇಲ್ಮನೆ ಚುನಾವಣೆ: ಕಾಂಗ್ರೆಸ್ ಗೆಲುವು ನಿಶ್ಚಿತ-ಹರಿಪ್ರಸಾದ

Spread the loveಹುಬ್ಬಳ್ಳಿ,  : ಹಾನಗಲ್ ಉಪ ಚುನಾವಣೆಯಲ್ಲಿ ಮತದಾರರು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ …

Leave a Reply

Your email address will not be published. Required fields are marked *