Home / Top News / ಜನರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವುದು ತಪ್ಪು : ಅರವಿಂದ ಬೆಲ್ಲದ

ಜನರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವುದು ತಪ್ಪು : ಅರವಿಂದ ಬೆಲ್ಲದ

Spread the love

ಧಾರವಾಡ : ನಮ್ಮ ದೇಶದಲ್ಲಿ ‌ಸಾರ್ವಜನಿಕರಿಗೆ ಧಾರ್ಮಿಕ ಸ್ವತಂತ್ರ ನೀಡಲಾಗಿದೆ. ಯಾರು ಯಾವ ಧರ್ಮವನ್ನು ಬೇಕಾದರೂ ಫಾಲೋ ಮಾಡಬಹುದು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆಸೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದು ತಪ್ಪು. ಹಾಗಾಗಿ ಮತಾಂತರ ನಿಷೇಧ ಕಾಯ್ದೆ ಇಂದು ತುಂಬಾ ಅವಶ್ಯಕವಾಗಿದೆ ಎಂದು ಶಾಸಕ ಅರವಿಂದ ಬೆಲ್ಲ‌ದ ಹೇಳಿದರು. ‌

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಆಸೆ, ಆಮಿಷಗನ್ನು ಒಡ್ಡಿ ಹಾಗೂ ಹಲವು ತಂತ್ರಗಳ‌ ಮೂಲಕ ಜನರನ್ನು ಮತಾಂತರ ಮಾಡಲಾಗುತ್ತಿದೆ. ಇದು ತಪ್ಪಬೇಕು ಎಂಬ ಆಶೆಯನ್ನು ನಮ್ಮ ಪಕ್ಷ ಹೊಂದಿದೆ.‌ ಬಲವಂತ ಹಾಗೂ ಆಮಿಷಗಳ ಮೂಲಕ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ಇಂದು ಅವಶ್ಯವಾಗಿದೆ.‌ಆ ನಿಟ್ಟಿನಲ್ಲಿ ನಮ್ಮ‌ಸರ್ಕಾರ, ಗೃಹ ಮಂತ್ರಿಗಳು ಗಮನ ಹರಿಸಿ ಕಯ್ದೆಯನ್ನು ಜಾರಿಗೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‌

*ಬರುವ ದಿನಗಳಲ್ಲಿ ಗೋ ಹತ್ಯೆ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗುತ್ತದೆ.*

ಗೋ ಹತ್ಯೆ ಕಾಯ್ದೆಯು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವುದು ನೀಜ. ಕೊರೊನಾ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕಂಪ್ಲೀಟ್ ಆಗಿ‌ ಇಂಪ್ಲಿಮೆಂಟ್ ಆಗಿಲ್ಲ. ಬರುವ ದಿನಗಳ ಗೋ ಹತ್ಯೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿವುದು ಎಂದು ತಿಳಿಸಿದರು.

About Santosh Naregal

Check Also

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

Spread the loveಹುಬ್ಬಳ್ಳಿ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಹೊರವಲಯದಲ್ಲಿ …

Leave a Reply

Your email address will not be published. Required fields are marked *

[the_ad id="389"]