Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಅತ್ಯಂತ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ರೆ ಅದು ಯುಪಿಎ ಕಾಲದಲ್ಲಿ : ಪ್ರಹ್ಲಾದ್ ಜೋಶಿ ವಾಗ್ದಾಳಿ

ಅತ್ಯಂತ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ರೆ ಅದು ಯುಪಿಎ ಕಾಲದಲ್ಲಿ : ಪ್ರಹ್ಲಾದ್ ಜೋಶಿ ವಾಗ್ದಾಳಿ

Spread the love

ಹುಬ್ಬಳ್ಳಿ : 50 ವರ್ಷದ ನಂತರ ಪ್ರತಿಭಟನೆ ಮಾಡೋದನ್ನ ಕಾಂಗ್ರೆಸ್ ಕಲಿತಿದೆ. ಅವರ ಆಳ್ವಿಕೆಯಲ್ಲಿ ಹಲವಾರು ಭ್ರಷ್ಟಾಚಾರ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಹಗರಣಗಳನ್ನ ಮಾಡಿದ್ದಾರೆ.‌ಆದ್ರೆ ಈಗ ಈಗ ಬೆಲೆ ಏರಿಕೆ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.

ನಗರದಲ್ಲಿಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧ ಪಕ್ಷವಾಗಿ ಎಚ್ಚರಿಸಲಿ ಅವರ ಭಾವನೆಗಳನ್ನು ನಾವು ಸ್ಪಂದನೆ ನೀಡುತ್ತೇವೆ. 59 ವರ್ಷಗಳ ಕಾಲ ಯಾವ ರೀತಿ ಲೂಟಿ ಮಾಡಿದ್ರು. ನಮ್ಮ ಡಿಫೆನ್ಸ್ ಯಾವ ರೀತಿ ಇತ್ತು, ಯಾವ ರೀತಿ ತುಷ್ಟಿಕರಣದ ರಾಜಕಾರಣ ಮಾಡಿದ್ರು ಅನ್ನೋದು ಗೊತ್ತಿದೆ.
ಅತ್ಯಂತ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ರೆ ಅದು ಯುಪಿಎ ಕಾಲದಲ್ಲಿ.
2ಜಿ, ಕಲ್ಲಿದ್ದಲು ವಿಚಾರದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿತ್ತು ಎಂದು ವಾಗ್ದಾಳಿ ನಡೆಸಿದರು.

ಉಪಚುನಾಚಣೆ ಟಿಕೆಟ್ ಹಂಚಿಕೆ ಒಬ್ಬರ ನೇತೃತ್ವದಲ್ಲಿ ನಡೆಯುವುದಿಲ್ಲ.
ಬಿಜೆಪಿಯಲ್ಲಿ ಒಬ್ಬನೇ ನೇತೃತ್ವದಲ್ಲಿ ಟಿಕೆಟ್ ಹಂಚಿಕೆ ಆಗುವುದಿಲ್ಲ. ಯಾವುದೇ ರಾಜ್ಯದಲ್ಲಿ ಪಾರ್ಟಿ ಒಬ್ಬನ ನೇತೃತ್ವದಲ್ಲಿ ಟಿಕೆಟ್ ಹಂಚಿಕೆ ಮ ಮಾಡುವುದಿಲ್ಲ. ಅದು ಯಡಿಯೂರಪ್ಪ ಆಗಿರಲಿ ಬೇರೆ ಯಾರಾದರೂ ಆಗಿರಲಿ. ಪಕ್ಷ ಸಮರ್ಥ ವ್ಯಕ್ತಿ ಆಯ್ಕೆ ಮಾಡಲಿದೆ ಎಂದರು.

ಪ್ರಜ್ವಲ್ ರೇವಣ್ಣ ಆರ್ ಎಸ್ ಎಸ್ ದೆಹಲಿಗೆ ಓಡುತ್ತೆ ಅನ್ನೋ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹುಲಿ ಅನ್ನೋದು ಯಾರು ಅನ್ನೋದು ಗೊತ್ತಾಗಬೇಕು. ಆಗ ಮಾತ್ರ ಅದಕ್ಕೆ ಉತ್ತರ ಕೊಡೋಕೆ ಸಾಧ್ಯ.ಬಿಜೆಪಿಯನ್ನ ತುಕಡಿ ತುಕಡಿ ಮಾಡ್ತೀವಿ ಅನ್ನೋ ಕನ್ಹಯ್ಯ ಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ
ಅವರು, ದೇಶವನ್ನ ತುಕಡೆ ತುಕಡೆ ಮಾಡೋಕೆ ಹೊರಟಿದ್ದರು. ಆದ್ರೆ ಅದು ಆಗಿಲ್ಲ ಬಿಜೆಪಿ ತುಕಡೆ ಮಾಡೋಕೆ ಆಗಲ್ಲ.
2019 ರಲ್ಲಿ ಜನ ಅವರಿಗೆ ಏನು ತೋರಿಸಬೇಕು ಅದನ್ನ ತೋರಿಸಿದ್ದಾರೆ ಎಂದರು.

ಸಿದ್ದರಾಮಯ್ಯ ತಾಲಿಬಾಲ್ ಹೋಲಿಕೆ ಮಾಡುವದು
ಮುಸಲ್ಮಾನರನ್ನ ಓಲೈಕೆಗೆ ಆರ್ ಎಸ್ ಎಸ್ ಬೈದರೆ ವೋಟು ಸಿಗುತ್ತೆ ಭ್ರಮೆಯಿಂದ ಮಾತನಾಡುತ್ತಾರೆ.
ತುಷ್ಟಿಕರಣದ ರಾಜಕಾರಣದಿಂದ ಅವ್ರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ.
ಅವರು ಬುದ್ದಿ ಕಲಿಯುವುದಿಲ್ಲ.
ಬೆಂಗಳೂರು ಗಲಭೆ ನಡೆದಾಗಲೇ ಅಖಂಡ ಶ್ರೀನಿವಾಸ ವಿರುದ್ಧವೇ ಅವರು ನಡೆದುಕೊಂಡರು ಅದೆಲ್ಲರಿಗೂ ಗೊತ್ತಿರುವ ವಿಚಾರ ಎಂದು ಕುಟುಕಿದರು.

About Santosh Naregal

Check Also

ಸಾರ್ವಜನಿಕ ಗಣೇಶ ಮಂಡಳಿಗಳಿಗೆ 2 ಕೆಜಿ ಬೆಳ್ಳಿ ನಾಣ್ಯಗಳು ವಿತರಣೆಗೆ : ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಚಾಲನೆ

Spread the loveಹುಬ್ಬಳ್ಳಿ : ನಗರದಲ್ಲಿಂದು ಇದೇ ಮೊದಲ ಬಾರಿಗೆ ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ಅಯೋಜಿಸಿದ 200 ಸಾರ್ವಜನಿಕರ ಗಣೇಶ …

Leave a Reply

Your email address will not be published. Required fields are marked *

[the_ad id="389"]