Home / Top News / ಧಾರವಾಡದಲ್ಲಿ ಬಾರ ಶೆಟರ್ ಮುರಿದು ಕಳ್ಳತನ: ಮದ್ಯದ ಬಾಟಲ್ ಜೊತೆಗೆ ಸಿಸಿಟಿವಿ ಡಿವಿಆರ್ ಕದ್ದು ಪರಾರಿಯಾದ ಚಾಲಾಕಿ ಕಳ್ಳರು

ಧಾರವಾಡದಲ್ಲಿ ಬಾರ ಶೆಟರ್ ಮುರಿದು ಕಳ್ಳತನ: ಮದ್ಯದ ಬಾಟಲ್ ಜೊತೆಗೆ ಸಿಸಿಟಿವಿ ಡಿವಿಆರ್ ಕದ್ದು ಪರಾರಿಯಾದ ಚಾಲಾಕಿ ಕಳ್ಳರು

Spread the love

ಧಾರವಾಡ :ಬಾರ್‌ನ ಶಟರ್ ಮುರಿದು ಚಾಲಾಕಿ ಕಳ್ಳರು ತಮ್ಮ ಕೈಚಳಕ ತೋರಿಸಿ, ಬಾರನಲ್ಲಿದ ಬಾಟಲ್, ನಗದು ಹಣದ ಜೊತೆಗೆ ಸಿಸಿಟಿವಿ ಡಿವಿಆರ್‌ನ್ನು ಕದ್ದುಕೊಂಡ ಹೋಗಿರುವ ಘಟನೆ ಧಾರವಾಡ ಸಪ್ತಾಪುರ ಬಾವಿ ಬಳಿಯ ತ್ರಿವೇಣಿ ಬಾರನಲ್ಲಿ ನಡೆದಿದೆ.

ಕಳೆದ ದಿನ ತಡ ರಾತ್ರಿ ಕಳ್ಳರು ಕೈಚಳಕ ತೋರಿಸಿದ್ದು, ಕಬ್ಬಿನ ರಾಡನಿಂದ ಬಾರಿನ ಶೆಟರ್‌ ಮುರಿದ್ದಾರೆ. ಬಳಿಕ ಒಳೆಗೆ ನುಗ್ಗಿರುವ ಕಳ್ಳರು ಸಿಸಿಟಿವಿ ಕ್ಯಾಮೆರಾ‌ಗಳನ್ನು ಡ್ಯಾಮೆಜ್ ಮಾಡಿದ್ದಾರೆ. ಸಿಸಿಟಿವಿಯ ಡಿವಿಆರ್ ಕದ್ದಿರು ಚಾಲಕಿ‌ ಕಳ್ಳರು, ಬಾರ್‌ನ ಕೌಂಟರ‌ನಲ್ಲಿದ್ದ ನಲವತ್ತು ಸಾವಿರಕ್ಕೂ ಹೆಚ್ಚು ನಗದು ಹಣ‌ ಹಾಗೂ ಮದ್ಯದ ಬಾಟಲಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ತಡ ರಾತ್ರಿ ಎರಡು ಗಂಟೆಯ ನಂತರ ಕಳ್ಳರು ಈ ಕೃತ್ಯ ಎಸಗ್ಗಿರಬಹುದು ಎಂದು ಬಾರ ಮಾಲೀಕರು ಶಂಕೆ ವ್ಯಕ್ತಪಡಿಸುತ್ತಿದ್ದು, ಮುಂಜಾನೆ ಹತ್ತು ಗಂಟೆಯ ನಂತರ ಅಂಗಡಿಗೆ ಬಂದ ಮೇಲೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಇನ್ನೂ ಘಟನೆಯ ಕುರಿತು ಉಪನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾರ ಮಾಲೀಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

About Santosh Naregal

Check Also

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

Spread the loveಹುಬ್ಬಳ್ಳಿ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಹೊರವಲಯದಲ್ಲಿ …

Leave a Reply

Your email address will not be published. Required fields are marked *

[the_ad id="389"]