Home / Top News / ಭೀಕರ ಅಪಘಾತ : ಯುವಕರಿಬ್ಬರ ಧಾರುಣ ಸಾವು

ಭೀಕರ ಅಪಘಾತ : ಯುವಕರಿಬ್ಬರ ಧಾರುಣ ಸಾವು

Spread the love

ಹುಬ್ಬಳ್ಳಿ : ವೇಗವಾಗಿ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಯುವಕರು ಧಾರುಣವಾಗಿ ಸಾವಿಗೀಡಾದ ಘಟನೆ ಉಣಕಲ್ ಕೆರೆ ಬಳಿ ಪ್ರೆಸಿಡೆಂಟ್ ಹೊಟೆಲ್ ಎದುರು ನಡೆದಿದೆ.

ಯುವಕರು ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಹೀಗಾಗಿ ರಸ್ತೆಯ ಪಕ್ಕದ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತೀವ್ರವಾದ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಮೃತ ಯುವಕರ ಗುರುತು ಪತ್ತೆಯಾಗಿಲ್ಲ.

ಘಟನೆ ನಡೆಯುತ್ತಿದ್ದ ಹಾಗೇ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ, ಯುವಕರನ್ನ ಕಿಮ್ಸಗೆ ರವಾನೆ ಮಾಡಲಾಗಿತ್ತಾದರೂ, ಯಾವುದೇ ಪ್ರಯೋಜನವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Santosh Naregal

Check Also

ಕುಸುಗಲ್ ಗ್ರಾಮದಲ್ಲಿ ಮನೆಗಳ್ಳತನ ಲಕ್ಷಾಂತರ ರೂ ದೋಚಿದ ಕಳ್ಳರು : ಕಣ್ಣಿರು ಹಾಕಿದ ಕುಟುಂಬಸ್ಥರು

Spread the loveಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದನ್ನು ಮನಗಂಡ ಕಳ್ಳರು ಮನೆಯ ಬೀಗ ಮುರಿದು ಕನ್ನ ಹಾಕಿ ನಗದು ಹಗೂ …

Leave a Reply

Your email address will not be published. Required fields are marked *

[the_ad id="389"]