Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಜನಪ್ರತಿನಿಧಿಯಾಗಿ ಜನರ ಸೇವೆ ಮುಖ್ಯವಾಗಬೇಕು ಅಧಿಕಾರ ಮುಖ್ಯವಾಗಬಾರದು- ಸಚಿವ ಮುನ್ನೇನಕೊಪ್ಪ

ಜನಪ್ರತಿನಿಧಿಯಾಗಿ ಜನರ ಸೇವೆ ಮುಖ್ಯವಾಗಬೇಕು ಅಧಿಕಾರ ಮುಖ್ಯವಾಗಬಾರದು- ಸಚಿವ ಮುನ್ನೇನಕೊಪ್ಪ

Spread the love

ಧಾರವಾಡ್ : ಒಬ್ಬರು ಜನಪ್ರತಿನಿಧಿಯಾಗಿ ಆಯ್ಕೆಯಾದ ಮೇಲೆ ಅವರಿಗೆ ಜನ ಸೇವೆ ಮುಖ್ಯವಾಗಿರಬೇಕು ಹೊರತು ಅಧಿಕಾರ ಮುಖ್ಯವಾಗಬಾರದು. ಅಧಿಕಾರ ಅನ್ನುವುದು ಯಾರಿಗೂ ಶಾಸ್ವತವಲ್ಲ. ಈ ಹಿಂದೆ ನಾನು ಒಬ್ಬ ಶಾಸಕನಾಗಿದ್ದಾಗ ಅಂದಿನ ಸಚಿವರು ಕರೆದಾಗ ಸಭೆಗೆ ಹಾಜರಾಗುತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಸಭೆಗೆ ಗೈರಾದ ಸ್ವಪಕ್ಷೀಯ ಶಾಸಕ ಅರವಿಂದ ಬೆಲ್ಲದವರಿಗೆ ಸಚಿವ ಶಂಕರ್ ಪಾಟೀಲ್ ಮುನ್ನೇನಕೊಪ್ಪರವರು ಟಾಂಗ್ ನೀಡಿದರು.

ಧಾರವಾಡದ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಕೊರೊನಾ ಮೂರನೇ ಅಲೆ ತಡೆ ಹಾಗೂ ಪ್ರವಾಹ ಪರಿಹಾರ ಕುರಿತು ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ‌‌ ಅವರು, ರಾಜಕೀಯದಲ್ಲಿ ನಾವೆಲ್ಲರೂ ಕುಡಿಕೊಂಡು ಕೆಲಸ ಮಾಡಬೇಕಾಗುತ್ತದೆ. ಈ ಹಿಂದೆ ನಾನು ಶಾಸಕನಾಗಿದ್ದಾಗ ಯಾರಾದರೂ ಸಚಿವರು ಜಿಲ್ಲೆಯಲ್ಲಿ ಸಭೆ ಕರೆದರೆ, ಅಲ್ಲಿ ಹಾಜರಿದ್ದು ನನ್ನ ಕ್ಷೇತ್ರದ ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದೆ. ಅದೂ ಒಬ್ಬ ಜನಪ್ರತಿನಿಧಿಯ ಕರ್ತವ್ಯವಾಗಿರುತ್ತದೆ. ಅಲ್ಲದೆ ಅರವಿಂದ ಬೆಲ್ಲದವರು ನಾವು ಒಳ್ಳೆಯ ಸ್ನೇಹಿತರು. ಅವರು ಕೂಡಾ ಸಮಾಧಾನವಾಗಿದ್ದಾರೆ ಎನ್ನುವ ಮೂಲಕ ಸ್ವ ಪಕ್ಷೀಯ ಶಾಸಕರ ಗೈರು ಹಾಜರಿಯನ್ನು ಸಮರ್ಥಿಸಿಕೊಂಡರು.

ಇಲ್ಲಿ ಒಬ್ಬ ಜನಪ್ರತಿನಿಧಿಗೆ ಅಧಿಕಾರ ಮುಖ್ಯವಲ್ಲ ಜನಸೇವೆ ಮುಖ್ಯವಾಗಿರಬೇಕು. ಮುಂದಿನ ದಿನಗಳಲ್ಲಿ ಶಾಸಕ ಅರವಿಂದ ಬೆಲ್ಲದರವರಿಗೆ ಒಳ್ಳೆಯದಾಗುತ್ತದೆ. ಈಗಾಗಲೇ ಬೆಲ್ಲದರವರ ಜೊತೆಗೆ ಎರಡು ಬಾರಿ ಮಾತಾಡಿದ್ದೇನೆ. ಮುಂದಿನ ಸಭೆಗೆ ಖಂಡಿತವಾಗಿ ಅವರು ನಮ್ಮ ಜೊತೆಯಲ್ಲಿ ಸಭೆಗೆ ಹಾಜರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

About Santosh Naregal

Check Also

ಧಾರವಾಡದಲ್ಲಿ ಅತ್ಯಾಚಾರಿಗಳ ವಿರುದ್ಧ ಆಕ್ರೋಶ : ರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

Spread the loveರಾಜ್ಯದಲ್ಲಿ ಹೆಣ್ಮಕ್ಕಳ ಮೇಲೆ ನಡೆಯುತ್ತಿರು ಅತ್ಯಾಚಾರ ಪ್ರಕರಣಗಳ ತಡೆಗೆ ಕಠಿಣ ಕಾನೂನು ಜಾರಿಗೆ ಅಗ್ರಹಿಸಿ ಹಾಗೂ ಸ್ಮಾರ್ಟ್ …

Leave a Reply

Your email address will not be published. Required fields are marked *

[the_ad id="389"]