Home / Top News / ಡಿಕೆಶಿ,ಹೆಬಾಳ್ಕರ್ ನನ್ನ ಕಿಸೆಯಲ್ಲಿದ್ದಾರೆ ಅಂತಾನೇ ಇವರು; ಲಕ್ಷ್ಮಿ ಹೆಬ್ಬಾಳ್ಕರ ಅಳಿಯನ ವಿರುದ್ಧ ಅಳಲು ತೊಡಿಕೊಂಡ ಕಾರ್ಯಕರ್ತ

ಡಿಕೆಶಿ,ಹೆಬಾಳ್ಕರ್ ನನ್ನ ಕಿಸೆಯಲ್ಲಿದ್ದಾರೆ ಅಂತಾನೇ ಇವರು; ಲಕ್ಷ್ಮಿ ಹೆಬ್ಬಾಳ್ಕರ ಅಳಿಯನ ವಿರುದ್ಧ ಅಳಲು ತೊಡಿಕೊಂಡ ಕಾರ್ಯಕರ್ತ

Spread the love

ಹುಬ್ಬಳ್ಳಿ : ಕಳೆದ ದಿನ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ನಡೆದಿದ್ದ ಬೆಳಗಾವಿ ವಿಭಾಗದ ಮಟ್ಟದ ಕೈ ನಾಯಕರ ಸಭೆಯಲ್ಲಿ ಕಾರ್ಯಕರ್ತನೊಬ್ಬ ಪುಲ್ ವೈಲೆಂಟ್ ಆಗಿದ್ದು, ರಾಜ್ಯ ಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರ ಹಾಗೂ ರಾಜ್ಯ ಉಸ್ತುವಾರಿ ಮುಂದೆ ತನ್ನ ಅಳನ್ನು ತೊಂಡಿಕೊಂಡಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಬೆಳಗಾವಿ ಸೇರಿದಂತೆ ಹುಬ್ಬಳ್ಳಿ ಧಾರವಾಡ, ಹಾವೇರಿ, ಗದಗ, ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರ‌ ಜಿಲ್ಲಾ ನಾಯಕರ ಜೊತೆ ಸಮಾಲೋಚನೆ ಸಭೆ ನಡೆದಿತ್ತು. ‌ಆದರೆ
ಧಾರವಾಡ ಜಿಲ್ಲೆಯ ಮುಖಂಡರ ಸಭೆ ನಡೆಯುತ್ತಿದ್ದ ಸಮಯದಲ್ಲಿ ಒಳಗೆ ಬಂದಿದ್ದ ಕಾಂಗ್ರೆಸ್ ನ ಗಿರೀಶ ಗದಿಗೆಪ್ಪಗೌಡರವರು ನೇರಾ ನೇರವಾಗಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ದಲಿತ ಯುವಕನ ಸ್ಥಾನವನ್ನ ಪಡೆದಿದಲ್ಲದೇ ಲಕ್ಷ್ಮೀ ಹೆಬ್ಬಾಳ್ಕರ ಹಾಗೂ ಡಿ.ಕೆ.ಶಿವುಕುಮಾರ ನನ್ನ ಕಿಸೆಯಲ್ಲಿದ್ದಾರೆಂದು ಹೇಳಿಕೊಳ್ಳುತ್ತಾರೆಂದು ಉಸ್ತುವಾರಿಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾನೆ.

 

 

ಅಲ್ಲದೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಜತ ಉಳ್ಳಾಗಡಿ ಮಠ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅಳಿಯರಾಗಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಸ್ಥಳಿಯವಾಗಿ ತುಳಿಯುವುದಕ್ಕೆ ಮುಂದಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಪಕ್ಷದ ನಾಯಕರು ಕ್ರಮ ಕೈಗೊಳ್ಳಬೇಕು ಎಂದು ಗಿರೀಶ ಗದಿಗೆಪ್ಪಗೌಡರವರು ಒತ್ತಾಯ ಮಾಡಿದ್ದಾರೆ. ಆದರೆ ಕೈ ಪಕ್ಷದ ಮುಖಂಡರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುವುದು ಈಗ ಕುತೂಹಲ ಮೂಡಿಸಿದೆ.

About Santosh Naregal

Check Also

ಧಾರವಾಡದಲ್ಲಿ ಅತ್ಯಾಚಾರಿಗಳ ವಿರುದ್ಧ ಆಕ್ರೋಶ : ರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

Spread the loveರಾಜ್ಯದಲ್ಲಿ ಹೆಣ್ಮಕ್ಕಳ ಮೇಲೆ ನಡೆಯುತ್ತಿರು ಅತ್ಯಾಚಾರ ಪ್ರಕರಣಗಳ ತಡೆಗೆ ಕಠಿಣ ಕಾನೂನು ಜಾರಿಗೆ ಅಗ್ರಹಿಸಿ ಹಾಗೂ ಸ್ಮಾರ್ಟ್ …

Leave a Reply

Your email address will not be published. Required fields are marked *

[the_ad id="389"]