Home / Top News / ರಾಜ್ಯ ಬಿಜೆಪಿ ನಾಯಕರು ಜನರ ಹಿತ ಮರೆತು ಅಧಿಕಾರಕ್ಕಾ ಓಡಾಟ ನಡೆಸಿದ್ದಾರೆ- ವಿಪಕ್ಷ ನಾಯಕ ಸಿದ್ದರಾಮಯ್ಯಾ

ರಾಜ್ಯ ಬಿಜೆಪಿ ನಾಯಕರು ಜನರ ಹಿತ ಮರೆತು ಅಧಿಕಾರಕ್ಕಾ ಓಡಾಟ ನಡೆಸಿದ್ದಾರೆ- ವಿಪಕ್ಷ ನಾಯಕ ಸಿದ್ದರಾಮಯ್ಯಾ

Spread the love

ಹುಬ್ಬಳ್ಳಿ : ರಾಜ್ಯ ಬಿಜೆಪಿ ನಾಯಕರಿಗೆ ಜನರ ಹಿತಕ್ಕಿಂತ ಅವರಿಗೆ ಅಧಿಕಾರವೇ ಮುಖ್ಯವಾಗಿದೆ. ಅಧಿಕಾರ ಪಡೆಯುವದಕ್ಕಾಗಿ ಈಗ ಬಿಜೆಪಿ ನಾಯಕರು ಓಡಾಟ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಾ ಬಿಜೆಪಿ ನಾಯಕರ ದೆಹಲಿ ಓಡಾಟಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿ ಖಾಸಗಿ ಹೋಟೆಲ್ ನಡೆದ ಬೆಳಗಾವಿ ವಿಭಾಗ ಮಟ್ಟದ ನಾಯಕರ ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರವಾಹ ಬಂದ ಸಂದರ್ಭದಲ್ಲಿ, ಜನರ ಹಿತ ಮರೆತು ಈಗ ಬಿಜೆಪಿಗರು‌ ದೆಹಲಿ, ಬೆಂಗಳೂರು ಓಡಾಟ ಮಾಡುತ್ತಿದ್ದಾರೆ. ಹಾಲಿ ಸಿಎಂ ಬೊಮ್ಮಾಯಿ‌ ಅವರು ಕಾಟಾಚಾರಕ್ಕೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ವೀಕ್ಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಮಟ್ಟ ಹೆಚ್ಚಾಗಿ ಆಗಿದೆ. ಜೊತೆಗೆ ಬಾಗಲಕೋಟೆ, ಕೊಡಗು ಶಿವಮೊಗ್ಗ ಮಲೆನಾಡು ಪ್ರದೇಶಗಲ್ಲಿ ಪ್ರವಾಹವಾಗಿದೆ. ಒಂದು ಜಿಲ್ಲೆಗೆ ಹೋಗಿ ಬಂದು ಈಗ ಸಿಎಂ ದೆಹಲಿಗೆ ಹೋಗಿದ್ದಾರೆ. ಪ್ರವಾಹ ಬಂದ ಸಂದರ್ಭದಲ್ಲಿ ಸಿಎಂ ಬದಲಾವಣೆ ದೆಹಲಿ ಓಡಾಟ ಮಾಡುತ್ತಾ ರಾಜ್ಯದ ಜನತೆಗೆ ಬಿಜೆಪಿ ದ್ರೋಹ ಮಾಡುತ್ತಿದೆ ಎಂದು ಕಿಡಿಕಾರಿದರು.‌

*ಬೊಮ್ಮಾಯಿ ರಬ್ಬರ ಸ್ಟ್ಯಾಂಪ್ ಚಿಪ್ ಮಿನಿಸ್ಟರ್*

ರಬ್ಬರ ಸ್ಟ್ಯಾಂಪ್ ಚಿಪ್ ಮಿನಿಸ್ಟರ್ ಅಂತಾ ನಾವು ಎಲ್ಲೂ ಹೇಳಿಲ್ಲ. ಅವರೇ ನಾವು ರಬ್ಬರ್ ಸ್ಟ್ಯಾಂಫ್ ಚಿಪ್ ಮಿನಿಸ್ಟರ್ ಅಲ್ಲಾ ಅಂತ್ತಿದ್ದಾರೆ. ಇದರ ಅರ್ಥ ಬೊಮ್ಮಾಯಿ ಅವರು ರಬ್ಬರ್ ಸ್ಟ್ಯಾಂಪ್ ಮುಖ್ಯಂತ್ರಿ ಎಂದು ವ್ಯಂಗ್ಯವಾಡಿದರು.

ಮುಖ್ಯಂಮತ್ರಿಗಳು ಬದಲಾವಣೆ ಆಗಿದ್ದಾರೆ. ಆದರೆ ಪಕ್ಷ ಬದಲಾವಣೆ ಆಗಿಲ್ಲ. ಹಿಂದೆ ಇದ್ದ ಭ್ರಷ್ಟಾಚಾರ ಹಾಗೇ ಮುಂದುವರೆಯುತ್ತದೆ. ಬೊಮ್ಮಾಯಿ ಸಿಎಂ ಆದ ತಕ್ಷಣವೇ ಪಾರದರ್ಶಕ ಬಂದ್ ಬೀಡುತ್ತಾ..?. ಈ ಹಿಂದೆ ಬೊಮ್ಮಾಯಿ‌ ಅವರು ಯಡಿಯೂರಪ್ಪನವರ ಭ್ರಷ್ಟ ಸರ್ಕಾರದಲ್ಲಿ ಎರಡು ವರ್ಷ ಮಂತ್ರಿಯಾಗಿದ್ದರು. ಈಗ ಹೇಗೆ ಪಾರದರ್ಶಕ ಬರುತ್ತೆ ಎಂದು ಒ್ರಶ್ನೆ ಮಾಡಿದರು.

ರಾಜ್ಯದಲ್ಲಿ ಆರ್ಥಿಕ‌ ಪರಿಸ್ಥಿತಿ ದಿವಾಳಿಯಾಗಿದೆ ಸಿಎಂ ಬೊಮ್ಮಾಯಿವರು ಆಡಳಿತ ನಡೆಸಲು ಕಷ್ಟವಿದೆ. ಸಿಎಂ ಆದ ತಕ್ಷಣ ಬೊಮ್ಮಾಯಿ ಘೋಷಣೆ ಮಾಡಿದ ರೈತರ ಮಕ್ಕಳ ಸ್ಕಾಲರ್ಶಿಪ್, ವೃದ್ಧಾಪ್ಯ ವೇತನ ಹೆಚ್ಚು ಮಾಡಿದ್ದಾರೆ. ಆದರೆ ದುಡ್ಡು ಎಲ್ಲಿಂದ ತರುತ್ತಾರೆ..? ಸರ್ಕಾರದ ಖಜಾನೆ ಖಾಲಿಯಾಗಿದೆ ಹೇಗೆ ಅಧಿಕಾರ ನಡೆಸುತ್ತಾರೆ ಎಂಬುವುದನ್ನು ಮುಂದೆ ನೋಡೋಣ ಎಂದರು.‌

About Santosh Naregal

Check Also

ಕುಸುಗಲ್ ಗ್ರಾಮದಲ್ಲಿ ಮನೆಗಳ್ಳತನ ಲಕ್ಷಾಂತರ ರೂ ದೋಚಿದ ಕಳ್ಳರು : ಕಣ್ಣಿರು ಹಾಕಿದ ಕುಟುಂಬಸ್ಥರು

Spread the loveಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದನ್ನು ಮನಗಂಡ ಕಳ್ಳರು ಮನೆಯ ಬೀಗ ಮುರಿದು ಕನ್ನ ಹಾಕಿ ನಗದು ಹಗೂ …

Leave a Reply

Your email address will not be published. Required fields are marked *

[the_ad id="389"]