Home / Movies / ಸಿನಿಮಾ ನಿರ್ದೇಶನಕ್ಕೆ ಅಡಿಯಿಟ್ಟ ಡಿ ಬಾಸ್ ಅಭಿಮಾನಿ ರಿಯಾಜ್ ಮೊಕಾಶಿ

ಸಿನಿಮಾ ನಿರ್ದೇಶನಕ್ಕೆ ಅಡಿಯಿಟ್ಟ ಡಿ ಬಾಸ್ ಅಭಿಮಾನಿ ರಿಯಾಜ್ ಮೊಕಾಶಿ

Spread the love

ಹುಬ್ಬಳ್ಳಿ : ಡಿ ಬಾಸ್ ಖ್ಯಾತಿಯ ನಟ ದರ್ಶನ್ ತೂಗುದೀಪ ಅವರ ಹುಬ್ಬಳ್ಳಿಯ ಅಪ್ಪಟ ಅಭಿಮಾನಿ ರಿಯಾಜ್ ಮೊಕಾಶಿ ಅಲಿಯಾಸ್ ರಿಯಾಜ್ ಚಿಂಗಾರಿ ಅವರು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ .

ಚಿತ್ರದ ನಾಯಕನಾಗಿ ಸಂತೋಷ್ ಚಿಕ್ಕಣ್ಣವರ್ ಹಾಗೂ ನಾಯಕಿಯಾಗಿ ಶ್ರೀನಿಧಿ ಅಭಿನಯಿಸುತ್ತಿದ್ದಾರೆ . ಇನ್ನುಳಿದಂತೆ ಆಕಾಶ ಹರವಿ , ಮಂಜು ಪೂಜಾರಿ , ಅರುಣ್ ಕಿರಣ್ ಶ್ರುತಿ ಹಾಸನ್ ಮತ್ತು ನೇತ್ರ ಸುರೇಶ್ , ಭರತ್ ಅಲ್ತಾಫ್ ಉದ್ದನ್ನವರ್ , ರಚ್ಚ ಸಿಎಸ್ಟಿ , ಪ್ರೇಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಛಾಯಾಗ್ರಹಣವನ್ನು ಅರುಣ್ ಚಿಕ್ಕೂಸ್‌ ನಿರ್ವಹಿಸುತ್ತಿದ್ದಾರೆ . ಚಿತ್ರಕ್ಕೆ ಹುಬ್ಬಳ್ಳಿ ಪ್ರೊಡಕ್ಷನ್ ಬಂಡವಾಳ ಹೂಡಿದೆ . ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ .

About Santosh Naregal

Check Also

ವಾಣಿಜ್ಯ ನಗರಿಯಲ್ಲಿ ಅಪರಾದ ಕೃತ್ಯ ಹಿನ್ನೆಲೆಯಲ್ಲಿ ರೌಡಿ ಪರೇಡ್

Spread the loveಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಚಟುವಟಿಕೆಗಳ ಹೆಚ್ಚಳ ಹಿನ್ನೆಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ …

Leave a Reply

Your email address will not be published. Required fields are marked *

[the_ad id="389"]