Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಪ್ರಥಮ ಪಿಯುಸಿ ಕಡ್ಡಾಯ ಪ್ರವೇಶಕ್ಕೆ ನೀತಿ ಜಾರಿಗೆ ಗಂಗಾಧರ ದೊಡವಾಡ ಆಗ್ರಹ

ಪ್ರಥಮ ಪಿಯುಸಿ ಕಡ್ಡಾಯ ಪ್ರವೇಶಕ್ಕೆ ನೀತಿ ಜಾರಿಗೆ ಗಂಗಾಧರ ದೊಡವಾಡ ಆಗ್ರಹ

Spread the love

ಜುಲೈ 19 ಹಾಗೂ 21 ರಂದು ರಾಜ್ಯ ಸರಕಾರ ನಡೆಸಲು ಉದ್ದೇಶಿಸಿರುವ ಎಸೆಸೆಲ್ಸಿ ಪರೀಕ್ಷೆಯ ಪಲಿತಾಂಶವನ್ನು ಅಗಷ್ಟ ಹತ್ತರೊಳಗೆ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಶ್ರೀ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ ಈಗಾಗಲೇ ಸಿಬಿಎಸ್ಇ ,ಐಸಿಎಸ್ಇ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದು ಎಲ್ಲ ಮಕ್ಕಳು ಕಾಲೇಜ್ ಪ್ರವೇಶ ಪಡೆದು ಅಭ್ಯಾಸ ಆರಂಬಿಸಿ ಒಂದು ತಿಂಗಳು ಗತಿಸಿದೆ. ಹೀಗಿರುವಾಗ ಎಸ್ಎಸ್ಎಲ್ಸಿ ಪರೀಕ್ಷೆ ಪಾಸಾದ ಮಕ್ಕಳಿಗೆ ಕಾಲೇಜುಗಳಲ್ಲಿ ಪ್ರವೇಶಕ್ಕೆ ತೊಂದರೆ ಜೊತೆಗೆ ಡೋನೇಷನ್ ಹಾವಳಿ ಹೆಚ್ಚಾಗುವ ಸಂಭವವಿದ್ದು ರಾಜ್ಯಸರಕಾರ ಪ್ರಥಮ ಪಿಯುಸಿ ಪ್ರವೇಶ ವಿಷಯದಲ್ಲಿ ಕಡ್ಡಾಯ ಪ್ರವೇಶ ನೀತಿಯನ್ನು ಜಾರಿಗೆ ಮಾಡಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ರಾಜ್ಯ ಸರ್ಕಾರ ವನ್ನು ಒತ್ತಾಯಿಸಿದ್ದಾರೆ.ಬಡ ಮಕ್ಕಳು ಲಕ್ಷ ಲಕ್ಷ ಕೊಟ್ಟು ಪ್ರವೇಶ ಪಡೆಯಲು ಸಾಧ್ಯವಿಲ್ಲ ಹೀಗಾಗಿ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಭೀತಿ ಇದೆ ಆದ್ದರಿಂದ ಸರ್ಕಾರ ಪ್ರವೇಶಕ್ಕೆ ಬಂದ ಯಾವುದೇ ಮಕ್ಕಳನ್ನು ಕುಂಟು ನೆಪ ಹೇಳಿ ನಿರಾಕರಿಸಿದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕೆಂದೂ ದೊಡವಾಡ ಒತ್ತಾಯಿಸಿದ್ದಾರೆ.

About Santosh Naregal

Check Also

ಕೋವಿಡ್ ತಪಾಸಣಾ ವರದಿ ಪಡೆಯಲು ಸರಳ ವಿಧಾನ ಇಲ್ಲಿದೆ ನೋಡಿ

Spread the loveಹುಬ್ಬಳ್ಳಿ : ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಜನರು ತಪಾಸಣೆಗೆ ಒಳಪಡುವುದು ಅಗತ್ಯವಾಗಿದೆ. ತಪಾಸಣೆ ಮಾಡಿಸಿಕೊಂಡ ವ್ಯಕ್ತಿಗಳು …

Leave a Reply

Your email address will not be published. Required fields are marked *