Home / Top News / ಧಾರವಾಡ ಜಿಲ್ಲೆ ಅನ್ ಲಾಕ್ ಕುರಿತು ಪರಿಷ್ಕೃತ ಆದೇಶ : ಸಚಿವ ಜಗದೀಶ್ ಶೆಟ್ಟರ್

ಧಾರವಾಡ ಜಿಲ್ಲೆ ಅನ್ ಲಾಕ್ ಕುರಿತು ಪರಿಷ್ಕೃತ ಆದೇಶ : ಸಚಿವ ಜಗದೀಶ್ ಶೆಟ್ಟರ್

Spread the love

ಹುಬ್ಬಳ್ಳಿ: ರಾಜ್ಯ ಸರ್ಕಾರ ಕೋವಿಡ್ ಅನ್‌ಲಾಕ್ ಕುರಿತು ಹೊರಡಿಸಿದ ಆದೇಶದಲ್ಲಿ ಧಾರವಾಡ ಜಿಲ್ಲೆ ಬಿಟ್ಟು ಹೋಗಿತ್ತು. ಈ ಕುರಿತು ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಸರ್ಕಾರದ ಕಾರ್ಯದರ್ಶಿಯೊಂದಿಗೆ ಚರ್ಚಿಸಿದ್ದೇನೆ. ಜಿಲ್ಲೆಯಲ್ಲಿ 10 ದಿನಗಳ ಕೋವಿಡ್ ಪಾಸಿಟಿವಿಟಿ ಸರಾಸರಿ ದರ ಶೇ.4.5 ರಷ್ಟಿದೆ. ಧಾರವಾಡ ಜಿಲ್ಲೆಗೂ ಅನ್‌ಲಾಕ್ ಆದೇಶ ವಿಸ್ತರಿಸಿ ಸರ್ಕಾರದಿಂದ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಕೋವಿಡ್ ಲಸಿಕಾ ಅಭಿಯಾನದ ಕುರಿತು ಅಧಿಕಾರಿಗಳ ಸಭೆ ನಡೆಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಐ.ಸಿ.ಎಂ.ಆರ್ ವರದಿಯಲ್ಲಿ ಜಿಲ್ಲೆಯ ಪಾಸಿಟಿವಿಟಿ ದರ ಶೇ.5 ಕ್ಕಿಂತಲೂ ಕಡಿಮೆಯಿದೆ. ಆದರೆ ಸ್ಟೇಟ್ ವಾರ್ ರೂಮ್‌ನಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗಿದ ಸಭೆಗೆ ಧಾರವಾಡ ಜಿಲ್ಲೆಯ ಪಾಸಿಟಿವಿ ದರ ಶೇ.5.7 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗಾಗಿ ಅನ್‌ಲಾಕ್ ಆದೇಶದಲ್ಲಿ ಜಿಲ್ಲೆಯ ಹೆಸರು ಕೈಬಿಟ್ಟಿತ್ತು.

ಜಿಲ್ಲೆಯಲ್ಲಿ ಜನರು ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ್ದಾರೆ. ಹುಬ್ಬಳ್ಳಿ ವ್ಯಾಪಾರ ವಹಿವಾಟಿಗೆ ಹೆಸರಾಗಿದೆ. ಅಕ್ಕಪಕ್ಕದ ಜಿ್ಳಲ್ಲೆಗಳ ಹಾಗೆ ಧಾರವಾಡ ಜಿ್ಳಲ್ಲೆಯನ್ನು ಸಹ ಸ್ವಾಭಾವಿಕವಾಗಿ ಅನ್‌ಲಾಕ್ ಮಾಡಬೇಕು. ಸರ್ಕಾರ ಹೊರಡಿಸಿದ ಅನ್‌ಲಾಕ್ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಿಲ್ಲೆಯಲ್ಲಿ ಪಾಲಿಸಲಾಗುವುದು. ಈ ಬಾರಿ ಅನ್‌ಲಾಕ್ ಮಾರ್ಗಸೂಚಿಯಲ್ಲಿ ವ್ಯಾಪಾರ ವಹಿವಾಟಿಗಳಿಗೆ ಸಮಯ ಹೆಚ್ಚಿಸಲಾಗಿದೆ. ಬಿ.ಆರ್.ಟಿ.ಎಸ್ ಸೇರಿದಂತೆ ಅಂತರ್ ಜಿಲ್ಲಾ ಬಸ್ ಓಡಾಟ ಪ್ರಾರಂಭವಾಗವುದು. ಅಂತರಾಜ್ಯ ಬಸ್ ಓಡಾಟಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

About Santosh Naregal

Check Also

ಕೋವಿಡ್ ತಪಾಸಣಾ ವರದಿ ಪಡೆಯಲು ಸರಳ ವಿಧಾನ ಇಲ್ಲಿದೆ ನೋಡಿ

Spread the loveಹುಬ್ಬಳ್ಳಿ : ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಜನರು ತಪಾಸಣೆಗೆ ಒಳಪಡುವುದು ಅಗತ್ಯವಾಗಿದೆ. ತಪಾಸಣೆ ಮಾಡಿಸಿಕೊಂಡ ವ್ಯಕ್ತಿಗಳು …

Leave a Reply

Your email address will not be published. Required fields are marked *