Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಹುಬ್ಬಳ್ಳಿ ಕಿಮ್ಸ್ ಪ್ರಯೋಗಾಲಯದಲ್ಲಿ 3.35 ಲಕ್ಷಕ್ಕೂ ಅಧಿಕ ಕೋವಿಡ್ ತಪಾಸಣೆ

ಹುಬ್ಬಳ್ಳಿ ಕಿಮ್ಸ್ ಪ್ರಯೋಗಾಲಯದಲ್ಲಿ 3.35 ಲಕ್ಷಕ್ಕೂ ಅಧಿಕ ಕೋವಿಡ್ ತಪಾಸಣೆ

Spread the love

ಹುಬ್ಬಳ್ಳಿ ಕಿಮ್ಸ್ ಕೋವಿಡ್ ತಪಾಸಣೆ ಪ್ರಯೋಗಾಲಯದಲ್ಲಿ ಕೋವಿಡ್ ಪ್ರಾರಂಭದಿಂದ ಮೇ.17 ವರೆಗೆ 336518 ಮಾದರಿಗಳು ಕೋವಿಡ್ ತಪಾಸಣೆಗಾಗಿ ಸಲ್ಲಿಕೆಯಾಗಿವೆ. ಇದರಲ್ಲಿ 335132 ಮಾದರಿಗಳ ತಪಾಸಣೆ ನಡೆಸಿ ವರದಿಗಳನ್ನು ನೀಡಲಾಗಿದೆ. ಪ್ರಯೋಗಾಲಯದಲ್ಲಿ ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಹಾವೇರಿ, ಬಿಜಾಪುರ, ಬೆಳಗಾವಿ, ದಾವಣಗೆರೆ, ಕಲ್ಬುರ್ಗಿ, ಬಳ್ಳಾರಿ, ಕಾರವಾರ, ಉಡುಪಿ ಜಿಲ್ಲೆಯ ಮಾದರಿಗಳನ್ನು ಸಹ ಪರೀಕ್ಷಿಸಿ ವರದಿ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯ 283080 ಮಾದರಿಗಳು ಹಾಗೂ ಇತರೆ ಜಿಲ್ಲೆಯ 52052 ಮಾದರಿಗಳನ್ನು ಇದುವರೆಗೆ ಪರೀಕ್ಷಿ ವರದಿ ನೀಡಲಾಗಿದೆ. 24 ಗಂಟೆ ಒಳಗಾಗಿ ವರದಿಗಳನ್ನು ನೀಡುತ್ತಿದ್ದು ದಿನ ಒಂದಕ್ಕೆ 2000 ಪರೀಕ್ಷೆಗಳ ಗುರಿಯನ್ನು ಕಿಮ್ಸ್ ನೀಡಲಾಗಿದೆ. ಸದ್ಯ ಜಿಲ್ಲಾಡಳಿತದಿಂದ ಸರಾಸರಿ 1600 ಮಾದರಿಗಳನ್ನು ತಪಾಸಣೆಗಾಗಿ ಕಳಿಹಿಸಿಕೊಡುತ್ತಿದ್ದು, ನಿಗದಿತ ಸಮಯದಲ್ಲಿ ವರದಿ ನೀಡಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ತಪಾಸಣೆ ಪ್ರಯೋಗಾಲಗಳು ಇಲ್ಲದ ಸಂದರ್ಭದಲ್ಲಿ 4 ಸಾವಿರಕ್ಕೂ ಅಧಿಕ ಮಾದರಿಗಳ ತಪಾಸಣೆ ನೆಡೆಸಿ ವರದಿ ನೀಡಲಾಗಿದೆ ಎಂದು ಮೈಕ್ರೋಬೈಯಾಲಜಿ ಮುಖ್ಯಸ್ಥ ಹಾಗೂ ಪ್ರೋಫೆಸರ್ ಡಾ.ಮಹೇಶ್‌ಕುಮಾರ್ ತಿಳಿಸಿದ್ದಾರೆ.

About Santosh Naregal

Check Also

ಕೋವಿಡ್ ತಪಾಸಣಾ ವರದಿ ಪಡೆಯಲು ಸರಳ ವಿಧಾನ ಇಲ್ಲಿದೆ ನೋಡಿ

Spread the loveಹುಬ್ಬಳ್ಳಿ : ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಜನರು ತಪಾಸಣೆಗೆ ಒಳಪಡುವುದು ಅಗತ್ಯವಾಗಿದೆ. ತಪಾಸಣೆ ಮಾಡಿಸಿಕೊಂಡ ವ್ಯಕ್ತಿಗಳು …

Leave a Reply

Your email address will not be published. Required fields are marked *