Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಮೇ. 17 ರಿಂದ 24 ರವೆರೆಗೆ ಜಿಲ್ಲೆಯಲ್ಲಿ ಮದುವೆ ಆಯೋಜಿಸುವದನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ

ಮೇ. 17 ರಿಂದ 24 ರವೆರೆಗೆ ಜಿಲ್ಲೆಯಲ್ಲಿ ಮದುವೆ ಆಯೋಜಿಸುವದನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ

Spread the love

ಧಾರವಾಡ್ : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವದರಿಂದ ಮೇ.17 ರಿಂದ 24 ರವರೆಗೆ ಧಾರವಾಡ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳನ್ನು ನಿಷೇಧಿಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸತತವಾಗಿ ಶ್ರಮಿಸುತ್ತಿದ್ದರೂ ಸಾರ್ವಜನಿಕರ ಸಹಕಾರದಿಂದ ಮಾತ್ರ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರ ಆರೋಗ್ಯ ಸುರಕ್ಷತೆ ಮುಖ್ಯವಾಗಿರುವದರಿಂದ ಬರುವ ಮೇ.17 ರಿಂದ 24 ರ ವರೆಗೆ ಜಿಲ್ಲೆಯಲ್ಲಿ ಮದುವೆ ಆಯೋಜನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮತ್ತು ಮೇ 17ರಿಂದ 24 ರ ವರೆಗೆ ಮದುವೆ ಆಯೋಜನೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ತಹಸಿಲ್ದಾರ ಮತ್ತು ಪಾಲಿಕೆ ವಲಯ ಕಚೇರಯಿಂದ ಈಗಾಗಲೇ ಅನುಮತಿ ಪಡೆದದಿರುವ ಮದುವೆಗಳಿಗೆ ಈ ಆದೇಶ ಅನುವಯಿಸುವುದಿಲ್ಲ . ಮತ್ತು ಮುಂದಿನ ಎಂಟು ದಿನಗಳ ವರಗಿನ ಸಮಯದಲ್ಲಿ ಈ ನಿಶೇಧಾಜ್ಞೆ ಉಲ್ಲಂಘಿಸಿ, ಮದುವೆ ಆಯೋಜಿಸಿದರೆ ಸಂಘಟಕರ ವಿರುಧ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 1987 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅನ್ವಯ ಪ್ರಕರಣ ದಾಖಲಿಸಿ, ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ನಿಷೇಧಾಜ್ಞೆ ಹೊರಡಿಸಿದ್ದಾರೆ.

About Santosh Naregal

Check Also

ಧಾರವಾಡದಲ್ಲಿ ಅತ್ಯಾಚಾರಿಗಳ ವಿರುದ್ಧ ಆಕ್ರೋಶ : ರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

Spread the loveರಾಜ್ಯದಲ್ಲಿ ಹೆಣ್ಮಕ್ಕಳ ಮೇಲೆ ನಡೆಯುತ್ತಿರು ಅತ್ಯಾಚಾರ ಪ್ರಕರಣಗಳ ತಡೆಗೆ ಕಠಿಣ ಕಾನೂನು ಜಾರಿಗೆ ಅಗ್ರಹಿಸಿ ಹಾಗೂ ಸ್ಮಾರ್ಟ್ …

Leave a Reply

Your email address will not be published. Required fields are marked *

[the_ad id="389"]