Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸಾರಿಗೆ ನೌಕರರ ಮುಷ್ಕರ: ಹಳೇ ಬಸ್ ನಿಲ್ದಾಣದಿಂದ ಖಾಸಗಿ ಬಸ್ ಸಂಚಾರ

ಸಾರಿಗೆ ನೌಕರರ ಮುಷ್ಕರ: ಹಳೇ ಬಸ್ ನಿಲ್ದಾಣದಿಂದ ಖಾಸಗಿ ಬಸ್ ಸಂಚಾರ

Spread the love

ಹುಬ್ಬಳ್ಳಿ : ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ನಗರದ ಹಳೇ ಬಸ್ ನಿಲ್ದಾಣದಿಂದ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಿದೆ.

ಜಿಲ್ಲಾಡಳಿತ,ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಬೆಳಗಾವಿ, ವಿಜಯಪುರ, ಧಾರವಾಡದ‌ವಿವಿಧ ಪ್ರದೇಶ ,ಗದಗ ಹಾಗೂ ವಿವಿಧ ಭಾಗಗಳಿಗೆ ಖಾಸಗಿ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆಯೂ ಖಾಸಗಿ ಬಸ್ ಸಂಚಾರ ನಡೆಸಿವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಬಸ್ ನಿಲ್ದಾಣದ ಒಳಗಡೆಯಿಂದಲೇ ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿವೆ. ಬೆಂಗಳೂರು, ಮೈಸೂರು, ಕಲಬುರ್ಗಿ ಭಾಗಗಳಿಂದ ಬೆಳಿಗ್ಗೆಯೇ ಬಂದ ಪ್ರಯಾಣಿಕರು, ವಿವಿಧೆಡೆ ತೆರಳಲು ಸ್ವಲ್ಪ ಪರದಾಡಿದರು. ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿದೆ.
ಹೊರ ಜಿಲ್ಲೆಗಳಿಗೆ ವಿ.ಆರ್.ಎಲ್, ಗಣೇಶ, ಗುರುಪ್ರಸಾದ ಬಸ್’ಗಳು, ಅವಳಿನಗರದ ನಡುವೆ ಬೇಂದ್ರೆ ಬಸ್‌ಗಳು ಹಾಗೂ ಗ್ರಾಮೀಣ ಭಾಗಗಳಿಗೆ ಮ್ಯಾಕ್ಸಿಕ್ಯಾಬ್ ಸಂಚಾರ ಆರಂಭಿಸಿವೆ.

About Santosh Naregal

Check Also

ಹುಬ್ಬಳ್ಳಿ ಜನತೆ ಬೆಚ್ಚಿ ಬಿಳಿಸಿದ ಕೊಲೆ, ರುಂಡ ಮುಂಡ ಬೇರೆ, ದೇಹದ ಎಲ್ಲಾ ಅಂಗಗಳು ದಿಕ್ಕಿಗೊಂದೊಂದು, ಇಂತ ಪ್ರಕರಣ ಎಲ್ಲೂ ನಡೆದಿಲ್ಲ

Spread the loveಹುಬ್ಬಳ್ಳಿ : ರುಂದ ಹಾಗೂ ಮುಂಡ ಬೇರೆ, ಎರಡು ಕೈ, ಒಂದು ಕಾಲು ಪತ್ತೆ, ಇನ್ನೊಂದು ಕಾಲು …

Leave a Reply

Your email address will not be published. Required fields are marked *