Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ನಮ್ಮ ಜೀವನ ಕಷ್ಟದೊಳಗೆ ಸಿಲುಕಿದೆ ನಮ್ಮ ಕಡೆಗೆ ಸ್ವಲ್ಪ ನೋಡ್ರಿ

ನಮ್ಮ ಜೀವನ ಕಷ್ಟದೊಳಗೆ ಸಿಲುಕಿದೆ ನಮ್ಮ ಕಡೆಗೆ ಸ್ವಲ್ಪ ನೋಡ್ರಿ

Spread the love

ಹುಬ್ಬಳ್ಳಿ : ಖಾಸಗಿ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸಲು ಅನುಮತಿ ನೀಡುವ ಮೂಲಕ ಶಾಮಿಯಾನ ಉದ್ಯಮ ನಡೆಸಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಶಿವಕುಮಾರ್ ಹಿರೇಮಠ, ಈಗಾಗಲೇ ಕೊರೋನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷದಿಂದ ಶಾಮಿಯಾನ್ ಉದ್ಯಮ ನೆಲಕಚ್ಚಿದೆ. ರಾಜ್ಯದಲ್ಲಿ ಸಾವಿರಾರು ಮಾಲೀಕರು ಹಾಗೂ ಕಾರ್ಮಿಕರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದೀಗ ಮದುವೆ ಕಾರ್ಯಕ್ರಮಗಳ ಸೀಜನ್ ಆಗಿರುವ ಕಾರಣ ಅಡುಗೆಯವರು, ಲೈಟಿಂಗ್, ಶಾಮಿಯಾನ್, ಫೋಟೋ, ವಿಡಿಯೋಗ್ರಾಫರ್, ಪುರೋಹಿತರು, ಪತ್ರಿಕೆ ಪ್ರಿಂಟರ್, ಮಾರಾಟಗಾರರು, ಹೂವು ಮಾರುವವರೂ ಮದುವೆ ಹಾಗೂ ಸಮಾರಂಭಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ ಏಕಾಏಕಿ ನಿರ್ಬಂಧ ಹಾಕಿದರೇ ಗಾಯದ ಮೇಲೆ ಬರೆ ಏಳೆದಂತಾಗುತ್ತದೆ ಎಂದರು.

ಇನ್ನೂ ಸರ್ಕಾರ ಎಲ್ಲ ಉದ್ಯಮಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಅದರೆ ಶ್ಯಾಮಿಯಾನ ಉದ್ಯಮಕ್ಕೆ ಯಾವುದೇ ಅನುಕೂಲ ಮಾಡಿಲ್ಲ. ಈ ಬಗ್ಗೆ ಹಲವಾರು ಬಾರಿ ಸರ್ಕಾರಕ್ಕೆ ಅನುಮತಿ ಮಾಡಿದರು ಸಹಿತ ಯಾವುದೇ ಸ್ಪಂದನೆ ದೊರೆತಿಲ್ಲ. ಹಾಗಾಗಿ ಸರ್ಕಾರ ಸಂಕಷ್ಟದಲ್ಲಿರುವ ಶ್ಯಾಮಿಯಾನ ಕೆಲಸಗಾರರಿಗೆ ಕಾರ್ಯಕ್ರಮ ನಡೆಸಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.

About Santosh Naregal

Check Also

ಹುಬ್ಬಳ್ಳಿ ಜನತೆ ಬೆಚ್ಚಿ ಬಿಳಿಸಿದ ಕೊಲೆ, ರುಂಡ ಮುಂಡ ಬೇರೆ, ದೇಹದ ಎಲ್ಲಾ ಅಂಗಗಳು ದಿಕ್ಕಿಗೊಂದೊಂದು, ಇಂತ ಪ್ರಕರಣ ಎಲ್ಲೂ ನಡೆದಿಲ್ಲ

Spread the loveಹುಬ್ಬಳ್ಳಿ : ರುಂದ ಹಾಗೂ ಮುಂಡ ಬೇರೆ, ಎರಡು ಕೈ, ಒಂದು ಕಾಲು ಪತ್ತೆ, ಇನ್ನೊಂದು ಕಾಲು …

Leave a Reply

Your email address will not be published. Required fields are marked *