ಬೆಂಗಳೂರು: ನ್ಯಾಯಾಧೀಶರ ಹೇಳಿಕೆ ನಂತರ ಸಿಡಿ ಪ್ರಕರಣದ ಯುವತಿಯನ್ನ ಸದ್ಯ ಎಸ್ಐಟಿ ಅಧಿಕಾರಿಗಳು ತಮ್ಮ ಜೊತೆಗೆ ಆಡುಗೋಡಿಯ ಟೆಕ್ನಿಕಲ್ ಸೆಲ್ಗೆ ಕರೆತಂದಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಸಂತ್ರಸ್ತೆಯ ಪರ ವಕೀಲ ಜಗದೀಶ್ ವಾಯ್ಸ್ ಸ್ಯಾಂಪಲ್ ಮತ್ತು 161 ಅಡಿ ಯುವತಿಯ ಹೇಳಿಕೆ ಪಡೆಯಲು ಯುವತಿಯನ್ನ ಆಡುಗೋಡಿಯ ಟೆಕ್ನಿಕಲ್ ಸೆಲ್ಗೆ ಕರೆತಂದಿದ್ದಾರೆ. ಎಸ್ಐಟಿಗೆ ನಾನು ಅಥವಾ ಯಾರೂ ಯುವತಿಯನ್ನ ಹ್ಯಾಂಡ್ ಓವರ್ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
